ಚೆನ್ನೈ: ಲತಾ ಮಂಗೇಶ್ಕರ್ ಅವರು ಭಾರತೀಯ ಸಂಗೀತ ಮತ್ತು ಕಾವ್ಯದ ಭಾಗ ಎಂದು ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಕೊಂಡಾಡಿದ್ದಾರೆ. ಅಲ್ಲದೆ, ಅವರು ತಮಗೆ ಸ್ಫೂರ್ತಿದಾಯಕರಾಗಿದ್ದರು ಎಂದೂ ಅವರು ತಿಳಿಸಿದ್ದಾರೆ.

ಸಂಗೀತ ಕ್ಷೇತ್ರದ ಮೇರು ಪ್ರತಿಭೆ ಲತಾ ಮಂಗೇಶ್ಕರ್ ಅವರು ಭಾನುವಾರ ನಿಧನರಾದರು. ಇದರ ಹಿನ್ನೆಲೆಯಲ್ಲಿ ಮಾತನಾಡಿರುವ ರೆಹಮಾನ್ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

'ಇದು ನಮಗೆ ದುಃಖದ ದಿನ. ಲತಾ ಅವರಂತಹವರು ಸಂಗೀತ ಕ್ಷೇತ್ರದ ಮೇರು ವ್ಯಕ್ತಿತ್ವ ಮಾತ್ರವಲ್ಲ, ಅವರು, ಭಾರತೀಯ ಸಂಗೀತ ಮತ್ತು ಕಾವ್ಯದ ಭಾಗ. ಈ ಶೂನ್ಯವು ಶಾಶ್ವತವಾಗಿ ಉಳಿಯಲಿದೆ. ನನ್ನ ತಂದೆ ನಿತ್ಯ ಬೆಳಗ್ಗೆ ಎದ್ದ ಕೂಡಲೇ ಲತಾ ಮಂಗೇಶ್ವರ್ ಅವರ ಚಿತ್ರವನ್ನು ನೋಡುತ್ತಿದ್ದರು. ಪ್ರತಿದಿನ ರೆಕಾರ್ಡಿಂಗ್ಗೆ ಹೋಗುವ ಮುನ್ನ ಅವರು ಲತಾ ಅವರ ಚಿತ್ರ ನೋಡಿ ಸ್ಫೂರ್ತಿ ಪಡೆಯುತ್ತಿದ್ದರು. ಅದು ಹಾಗೇ ಮುಂದುವರಿಯಿತು. ಅವರ ಕೆಲವು ಹಾಡುಗಳನ್ನು ಸಂಯೋಜಿಸಿದ, ಅವರೊಂದಿಗೆ ಕೆಲ ಹಾಡುಗಳನ್ನು ಹಾಡಿದ ನಾನು ಅದೃಷ್ಟಶಾಲಿ' ಎಂದು ರೆಹಮಾನ್ ಹೇಳಿದ್ದಾರೆ.

ರೆಹಮಾನ್ ಅವರ ತಂದೆ ಆರ್ ಕೆ ಶೇಖರ್ ಸಂಗೀತ ಸಂಯೋಜಕರಾಗಿದ್ದರು.

ರೆಹಮಾನ್ ಅವರು ರಾಗ ಸಂಯೋಜನೆ ಮಾಡಿದ್ದ 'ದಿಲ್ ಸೆ' ಚಿತ್ರದ "ಜಿಯಾ ಜಲೆ" ಮತ್ತು 'ರಂಗ್ ದೇ ಬಸಂತಿ' ಚಿತ್ರದ "ಲುಕಾ ಚುಪ್ಪಿ" ಸೇರಿದಂತೆ ಹಲವು ಹಾಡುಗಳನ್ನು ಲತಾ ಅವರು ಹಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.