ಅಹಮದಾಬಾದ್: ‘ನಾಯಕತ್ವವು ವ್ಯಕ್ತಿಯೊಬ್ಬ ಉನ್ನತ ಸ್ಥಾನಕ್ಕೇರಿದ ನಂತರ ಆತನಲ್ಲಿ ಒಂಟಿತನದ ಭಾವನೆ ಮೂಡಿಸುತ್ತದೆ. ನಾನು ಇದನ್ನು ಅನುಭವಿಸಿದ್ದೇನೆ’ ಎಂದು ಇನ್ಫೊಸಿಸ್ ಸಹಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಭಾನುವಾರ ಹೇಳಿದರು.

ಅಂಜನಾ ದತ್ತ ಅವರು ರಚಿಸಿರುವ, ಉದ್ಯಮಿ ಮದನ ಮೋಹಂಕ ಅವರ ಜೀವನಚರಿತ್ರೆ ‘ಐ ಡಿಡ್ ವಾಟ್ ಐ ಹ್ಯಾಡ್ ಟು ಡು’ ಬಿಡುಗಡೆ ಮಾಡಿ ಮಾತನಾಡಿದರು.

‘ಮದನ್ ಅವರು ಕೂಡ ನಿನ್ನೆ ಇದೇ ಮಾತನ್ನು ಹೇಳಿದರು. ಈಗ ಅವರ ಪುತ್ರ ಮೆಹುಲ್ ಅವರಲ್ಲಿ ಕೂಡ ಇಂಥದೇ ಭಾವನೆ ಮನೆ ಮಾಡಿರುತ್ತದೆ ಎನಿಸುತ್ತದೆ’ ಎಂದರು.

‘ಮಾರ್ಗದರ್ಶನ ಕೋರಿ ನಿಮ್ಮತ್ತ ನೋಡುತ್ತಿರುವ ಲಕ್ಷಾಂತರ ಜನರ ಆತ್ಮವಿಶ್ವಾಸವನ್ನು ಹೆಚ್ಚಿಸುವುದು. ಅವರಿಗಾಗಿ ಸರಿಯಾದದ್ದನ್ನೇ ಮಾಡುವುದೇ ನಾಯಕತ್ವ ಎನಿಸುತ್ತದೆ’ ಎಂದು ನಾರಾಯಣಮೂರ್ತಿ ಹೇಳಿದರು.

ಮದನ್ ಮೋಹಂಕ ಅವರು ತೇಗಾಇಂಡಸ್ಟ್ರೀಜ್ ಸಂಸ್ಥಾಪಕರು. ಅದರ ಚೇರಮನ್ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಪುತ್ರ ಮೆಹುಲ್ ಈಗ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.