ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ (ವೈಝಾಗ್) ಅನಿಲ ಸೋರಿಕೆಯಾಗಿ 12 ಜನ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಜಿ ಪಾಲಿಮರ್ಸ್ ಕಂಪನಿಯ ಸಿಇಒ ಹಾಗೂ ಇಬ್ಬರು ನಿರ್ದೇಶಕರು ಸೇರಿದಂತೆ 10ಜನರನ್ನು ಮಂಗಳವಾರ ತಡ ರಾತ್ರಿ ಪೊಲೀಸರು ಬಂಧಿಸಿದ್ದಾರೆ.

ಅನಿಲ ಸೋರಿಕೆ ಘಟನೆ ಬಗ್ಗೆ ಆಂಧ್ರಪ್ರದೇಶ ಸರ್ಕಾರ ಉನ್ನತಮಟ್ಟದ ತನಿಖೆ ಸಮಿತಿಯನ್ನು ರಚನೆ ಮಾಡಿತ್ತು. ಈ ಸಮಿತಿ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರಿಗೆ ವರದಿ ಸಲ್ಲಿಸಿದ ಮರು ದಿನವೇ ಪೊಲೀಸರು 10ಜನರನ್ನು ಬಂಧಿಸಿದ್ದಾರೆ. ಘಟನೆ ನಡೆದು 2 ತಿಂಗಳ ಬಳಿಕ ಆರೋಪಿಗಳ ಬಂಧನವಾಗಿದೆ.

ಎಲ್ಜಿ ಪಾಲಿಮರ್ಸ್ನಲ್ಲಿ ಕಳಪೆ ಸುರಕ್ಷತಾಕ್ರಮಗಳು ಹಾಗೂ ನಿರ್ವಹಣೆ ಕೊರತೆಯೇ ಅನಿಲ ಸೋರಿಕೆಗೆ ಕಾರಣ ಎಂದು ಉನ್ನತಮಟ್ಟದ ತನಿಖಾ ವರದಿಯಲ್ಲಿ ಹೇಳಲಾಗಿದೆ ಎಂದು ವಿಶಾಖಪಟ್ಟಣ ಪೊಲೀಸ್ ಮುಖ್ಯಸ್ಥರಾದ ಆರ್,ಕೆ. ಮೀನಾ ತಿಳಿಸಿದ್ದಾರೆ.

ಮೇ 7ರಂದು ಎಲ್ಜಿ ಪಾಲಿಮರ್ಸ್ ವಿರುದ್ಧ ಸ್ಥಳೀಯ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಅನಿಲ ಸೋರಿಕೆಯಿಂದಾಗಿ 12 ಜನರು ಮೃತಪಟ್ಟು 585 ಜನರು ಅನಾರೋಗ್ಯಕ್ಕೆ ತುತ್ತಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.