ಶನಿವಾರ, 28 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಪಘಾತದಲ್ಲಿ ಮೃತಪಟ್ಟ ಐಟಿ ಉದ್ಯೋಗಿ: ₹4.5 ಕೋಟಿ ಪರಿಹಾರ ಕೊಡಿಸಿದ ಲೋಕ್ ಅದಾಲತ್

Published : 28 ಸೆಪ್ಟೆಂಬರ್ 2024, 12:41 IST
Last Updated : 28 ಸೆಪ್ಟೆಂಬರ್ 2024, 12:41 IST
ಫಾಲೋ ಮಾಡಿ
Comments

ಠಾಣೆ: ಅಮೆರಿಕದಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ಕ್ಷೇತ್ರದ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬರು, 2022ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಇದೀಗ ಇವರ ಕುಟುಂಬಕ್ಕೆ ₹4.5 ಕೋಟಿ ಪರಿಹಾರವನ್ನು ವಿಮಾ ಕಂಪನಿಯಿಂದ ರಾಷ್ಟ್ರೀಯ ಲೋಕ ಅದಾಲತ್ ಕೊಡಿಸಿದೆ.

ಪಂಕಜ್ ರಮೇಶ್ ಶೇಡ್ಗೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ₹8.37 ಲಕ್ಷ ವೇತನವಿತ್ತು. 2022ರ ಡಿ. 9ರಂದು ಪನ್ವೇಲ್– ಮುಂಬೈ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿರುವಾಗ ಅವರಿಗೆ ಟ್ರಕ್ ಡಿಕ್ಕಿ ಹೊಡೆದು ಮೃತಪಟ್ಟಿದ್ದರು.

ಪಂಕಜ್ ಅವರೊಬ್ಬರೇ ಕುಟುಂಬದ ಆದಾಯ ಮೂಲವೆಂದು ಪರಿಗಣಿಸಿ ಕುಟುಂಬಕ್ಕೆ ₹30 ಕೋಟಿ ಪರಿಹಾರ ನೀಡಬೇಕು ಎಂದು ವಕೀಲ ಜಿ.ಎ. ವಿನೋದ್ ವಿಮಾ ಕಂಪನಿಯನ್ನು ಆಗ್ರಹಿಸಿದ್ದರು. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಈ ಪ್ರಕರಣ ವಿಚಾರಣೆ ನಡೆಯಿತು.

ಅಂತಿಮವಾಗಿ ವಿಮಾ ಮೊತ್ತವಾಗಿ ₹4.50 ಕೋಟಿ ನೀಡಲು ಕಂಪನಿ ಒಪ್ಪಿಕೊಂಡಿದ್ದರಿಂದ ಪ್ರಕರಣವನ್ನು ನ್ಯಾಯಾಲಯ ಇತ್ಯರ್ಥಪಡಿಸಿತು. ಇದಕ್ಕೆ ಪಂಕಜ್ ಅವರ ಕುಟುಂಬವೂ ಒಪ್ಪಿಗೆ ಸೂಚಿಸಿತು.

 ಇದೇ ರೀತಿ ಕಂಪ್ಯೂಟರ್ ಸಂಸ್ಥೆಯೊಂದರಲ್ಲಿ ವ್ಯವಸ್ಥಾಪಕರಾಗಿದ್ದ ಸುಶೀಲ್ ಮೋಹನ ಸಾವಂತ್ ಎಂಬುವವರು ಮೋಟಾರ್‌ಸೈಕಲ್‌ನಲ್ಲಿ ಕಚೇರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬಸ್‌ ಡಿಕ್ಕಿ ಹೊಡೆದು ಮೃತಪಟ್ಟಿದ್ದರು. ಇವರಿಗೆ ವಿಮಾ ಕಂಪನಿಯು ₹1.33 ಕೋಟಿ ಪರಿಹಾರ ನೀಡಿದೆ. ಇವರ ಕುಟುಂಬದವರು ₹2 ಕೋಟಿ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT