ಲಖನೌ: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಬಹುಜನ ಸಮಾಜ ಪಕ್ಷವು (ಬಿಎಸ್‌ಪಿ) ಶುಕ್ರವಾರ ಬಿಡುಗಡೆ ಮಾಡಿದೆ.

ಪಕ್ಷದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಭೀಮ್ ರಾಜ್‌ಭರ್ ಅವರು ಆಜಂಗಢದಿಂದ ಹಾಗೂ ಮಾಜಿ ಸಂಸದ ಬಾಲಕೃಷ್ಣ ಚೌಹಾಣ್ ಅವರು ಘೋಸಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಎಟಾ ಕ್ಷೇತ್ರದಿಂದ ಮೊಹಮ್ಮದ್ ಇರ್ಫಾನ್, ಧೌರಹರ ಕ್ಷೇತ್ರದಿಂದ ಶ್ಯಾಮ್ ಕಿಶೋರ್ ಅವಸ್ಥಿ ಕಣಕ್ಕಿಳಿಯಲಿದ್ದಾರೆ ಎಂದು ಪಕ್ಷದ ಹೇಳಿಕೆ ತಿಳಿಸಿದೆ.

ಫೈಸಾಬಾದ್‌ನಿಂದ ಸಚ್ಚಿದಾನಂದ ಪಾಂಡೆ ಹಾಗೂ ಬಸ್ತಿ ಲೋಕಸಭಾ ಕ್ಷೇತ್ರದಿಂದ ದಯಾಶಂಕರ್ ಮಿಶ್ರಾ ಸ್ಪರ್ಧಿಸಲಿದ್ದಾರೆ. ಗೋರಖ್‌ಪುರ ಕ್ಷೇತ್ರದಿಂದ ಸ್ಪರ್ಧಿಸಲು ಜಾವೇದ್ ಸಿಮ್ನಾನಿ ಅವರಿಗೆ ಟಿಕೆಟ್ ನೀಡಿದೆ.

ಸತ್ಯೇಂದ್ರ ಕುಮಾರ್ ಮೌರ್ಯ ಅವರನ್ನು ಚಂದೌಲಿ ಕ್ಷೇತ್ರದಿಂದ ಹಾಗೂ ರಾಬರ್ಟ್‌ಗಂಜ್ (ಪರಿಶಿಷ್ಟ ಜಾತಿ) ಕ್ಷೇತ್ರದಿಂದ ಧನೇಶ್ವರ್ ಗೌತಮ್ ಅವರನ್ನು ಪಕ್ಷವು ಕಣಕ್ಕಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.