ನವದೆಹಲಿ: ದೆಹಲಿಯ ಮೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷವು ತನ್ನ ಅಭ್ಯರ್ಥಿಗಳನ್ನು ಭಾನುವಾರ ಘೋಷಿಸಿದೆ. ಇಲ್ಲಿ ಆಮ್ ಆದ್ಮಿ ಪಕ್ಷದ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ.

ಈಶಾನ್ಯ ದೆಹಲಿಯಿಂದ ಕನ್ಹಯ್ಯ ಕುಮಾರ್ ಹಾಗೂ ವಾಯುವ್ಯ ದೆಹಲಿಯಿಂದ ಉದಿತ್ ರಾಜ್, ಚಾಂದಿನಿ ಚೌಕ್‌ನಿಂದ ಜೆ.ಪಿ ಅಗರ್‌ವಾಲ್ ಅವರನ್ನು ಕಾಂಗ್ರೆಸ್ ಉಮೇದುವಾರರನ್ನಾಗಿ ಮಾಡಿದೆ.
.ದೆಹಲಿ ಅಬಕಾರಿ ನೀತಿ ಹಗರಣ: ಬಿಆರ್ಎಸ್ ನಾಯಕಿ ಕವಿತಾ ಏ.15ರವರೆಗೆ ಸಿಬಿಐ ವಶಕ್ಕೆ.
ದೆಹಲಿಯಲ್ಲಿ ಒಟ್ಟು ಏಳು ಲೋಕಸಭಾ ಕ್ಷೇತ್ರಗಳಿದ್ದು 4:3ರ ಅನುಪಾತದಲ್ಲಿ ಎಎಪಿ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿವೆ.

ಕನ್ಹಯ್ಯ ಕುಮಾರ್ ಅವರು ಎರಡು ಬಾರಿಯ ಸಂಸದ ಬಿಜೆಪಿಯ ಮನೋಜ್ ತಿವಾರಿ ಅವರನ್ನು ಎದುರಿಸಲಿದ್ದಾರೆ.
.ಸೋಮಣ್ಣ ವಿಧಾನಸಭೆ ಚುನಾವಣೆ ಖರ್ಚು ₹60 ಕೋಟಿ: ಸಿದ್ದರಾಮಯ್ಯ.
ಜೆ.ಪಿ ಅಗರ್‌ವಾಲ್ ಅವರು 1984, 1989 ಹಾಗೂ 1996ರಲ್ಲಿ ಚಾಂದಿನಿ ಚೌಕ್‌ನಿಂದ ಸಂಸದರಾಗಿದ್ದರು.

ಉದಿತ್ ರಾಜ್ 2014ರಲ್ಲಿ ವಾಯುವ್ಯ ದೆಹಲಿ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಸಂಸದರಾಗಿದ್ದರು. 2019ರಲ್ಲಿ ಕಾಂಗ್ರೆಸ್ ಸೇರಿದ್ದರು.

ದೆಹಲಿಯಲ್ಲಿ ಮೇ 25ಕ್ಕೆ ಮತದಾನ ನಡೆಯಲಿದೆ.
.ಲೋಕಸಭಾ ಚುನಾವಣೆ - 2024 | ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಳ ಏಟಿನ ಮಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.