ಹಲವು ಕಲ್ಯಾಣ ಕಾರ್ಯಕ್ರಮಗಳ ಜಾರಿಯ ನಂತರವೂ ಪಕ್ಷದ ಹಿನ್ನೆಗೆ ಕಾರಣ ತಿಳಿಯಲು ವಿಫಲನಾಗಿದ್ದೇನೆ. ಸವಾಲುಗಳನ್ನು ಎದುರಿಸಲು ಸಿದ್ಧನಿದ್ದೇನೆ. ವೈಎಸ್‌ಆರ್‌ಸಿಪಿ ಇನ್ನು ಧ್ವನಿ ಇಲ್ಲದವರ ಧ್ವನಿಯಾಗಿ ಕಾರ್ಯನಿರ್ವಹಿಸಲಿದೆ. ಗೆಲುವಿಗಾಗಿ ಚಂದ್ರಬಾಬುನಾಯ್ಡು ಪವನ್ ಕಲ್ಯಾಣ್ ಅವರಿಗೆ ಅಭಿನಂದನೆಗಳು.
ವೈ.ಎಸ್.ಜಗನ್ ಮೋಹನ ರೆಡ್ಡಿ ನಿರ್ಗಮಿತ ಮುಖ್ಯಮಂತ್ರಿ ಆಂಧ್ರಪ್ರದೇಶ
ಜಗನ್ ಮೋಹನ್ ರೆಡ್ಡಿಗೆ ಮುಖಭಂಗ
ಕಳೆದ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆಗೇರಿದ್ದ ವೈ.ಎಸ್.ಜಗನ್‌ಮೋಹನ್ ರೆಡ್ಡಿ ಅವರಿಗೆ ಈ ಬಾರಿ ತೀವ್ರ ಮುಖಭಂಗವಾಗಿದೆ. ವೈಎಸ್‌ಆರ್‌ಸಿಪಿ ಈ ಬಾರಿ 10 ಸ್ಥಾನವಷ್ಟೇ ಗೆದ್ದಿದೆ. ಈ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಿದ್ದ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಪುಲಿವೆಂದುಲ ವಿಧಾನಸಭೆ ಕ್ಷೇತ್ರದಲ್ಲಿ ಸಮೀಪದ ಪ್ರತಿಸ್ಪರ್ಧಿ ತೆಲುಗುದೇಶಂ ಪಕ್ಷದ ಬಿ.ರವಿ ವಿರುದ್ಧ ಕೇವಲ –– ಮತಗಳ ಅಂತರದಿಂದ ಪ್ರಯಾಸದ ಗೆಲುವು ಕಂಡಿದ್ದಾರೆ. ಇನ್ನೊಂದೆಡೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಹಾದಿಯಲ್ಲಿರುವ ಚಂದ್ರಬಾಬು ನಾಯ್ಡು ಮತ್ತು ಅವರ ಪುತ್ರ ಲೋಕೇಶ್ ಕ್ರಮವಾಗಿ ಕುಪ್ಪಂ ಮತ್ತು ಮಂಗಳಗಿರಿ ಕ್ಷೇತ್ರದಿಂದ ಗೆದ್ದು ವಿಧಾನಸಭೆಗೆ ಪ್ರವೇಶಿಸಿದ್ದಾರೆ. ಮೈತ್ರಿಪಕ್ಷ ಜನಸೇನಾದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಪೀತಪುರಂ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿ ವೈಎಸ್‌ಆರ್‌ಸಿಪಿಯ ವಿ.ಗೀತಾ ವಿರುದ್ಧ 61 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಮಂತ್ರಿಗಳಿಗೆ ಸೋಲು: ವೈಎಸ್‌ಆರ್‌ಸಿಪಿ ಸರ್ಕಾರದಲ್ಲಿ ಸಚಿವರಾಗಿದ್ದ ಆರ್.ಕೆ.ರೋಜಾ ಬೋಚಾ ಸತ್ಯನಾರಾಯಣ ಸಿ.ಗೋಪಾಲಕೃಷ್ಣ ಎಸ್.ಅಪ್ಪಾಲರಾಜು ಅಂಬಟಿ ರಾಮಬಾಬು ವಿ.ರಜಿನಿ ಟಿ.ವನಿತಾ ಅಮರನಾಥ್ ಅಮ್ಜದ್ ಭಾಷಾ ಆಡಳಿತವಿರೋಧಿ ಅಲೆಯಿಂದಾಗಿ ಪರಾಭವಗೊಂಡಿದ್ದಾರೆ.