ದಾಮೋಹ್ (ಮಧ್ಯಪ್ರದೇಶ): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಕೊಲ್ಲಲು ತಯಾರಾಗಿ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ರಾಜ ಪಟೇರಿಯಾ ಅವರನ್ನುಪನ್ನಾ ಜಿಲ್ಲಾ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಮೋದಿ ವಿರುದ್ಧ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಪನ್ನಾ ಜಿಲ್ಲೆಯಪವಾಯಿ ಪೊಲೀಸ್ ಠಾಣೆಯಲ್ಲಿಪಟೇರಿಯಾ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಸೋಮವಾರ ಮಧ್ಯಾಹ್ನ ಎಫ್‌ಐಆರ್ ದಾಖಲಾಗಿತ್ತು.

ಇಂದು (ಡಿ.13) ಬೆಳಗ್ಗೆ ದಾಮೋಹ್ ಜಿಲ್ಲೆಯ ಹಟ್ಟಾದಲ್ಲಿರುವ ಅವರನಿವಾಸದಲ್ಲಿಯೇಕಾಂಗ್ರೆಸ್ ನಾಯಕನನ್ನು ಬಂಧಿಸಲಾಗಿದೆ.

ಇದನ್ನೂ ಓದಿ:ಮೋದಿ ಹತ್ಯೆಗೆ ಕರೆ ಕೊಟ್ಟ ಕಾಂಗ್ರೆಸ್ ನಾಯಕ- ಪಟೇರಿಯಾ ವಿರುದ್ಧ ಎಫ್‌ಐಆರ್ ದಾಖಲು

ಪನ್ನಾ ಜಿಲ್ಲೆಯ ಪವಾಯಿ ಪಟ್ಟಣದಲ್ಲಿ ಭಾನುವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಪಟೇರಿಯಾ, ‘ಮೋದಿ ಚುನಾವಣೆ ಕೊನೆಗೊಳಿಸಲಿದ್ದಾರೆ.ಧರ್ಮ, ಜಾತಿ, ಭಾಷೆಯ ಆಧಾರದಲ್ಲಿ ವಿಭಜನೆ ಮಾಡುತ್ತಾರೆ. ದಲಿತರು, ಬುಡಕಟ್ಟು ಹಾಗೂ ಅಲ್ಪಸಂಖ್ಯಾತರ ಭವಿಷ್ಯ ಅಪಾಯದಲ್ಲಿದೆ. ಸಂವಿಧಾನ ಉಳಿಯಬೇಕಿದ್ದರೆ, ಮೋದಿ ಕೊಲ್ಲಲು ಸಜ್ಜಾಗಿ, ಅಂದರೆ ಅವರನ್ನು ಸೋಲಿಸಿ’ ಎಂದು ಹೇಳಿದ್ದರು.

‘ಇಂಥ ಹೇಳಿಕೆಗಳು ಈಗಿನ ಕಾಂಗ್ರೆಸ್, ಮಹಾತ್ಮಾ ಗಾಂಧಿ ಕಾಲದ ಕಾಂಗ್ರೆಸ್ ಅಲ್ಲ ಎನ್ನುವುದನ್ನು ತೋರಿಸುತ್ತದೆ. ಇದು ಮುಸಲೋನಿ ಮನಸ್ಥಿತಿಯ ಇಟಲಿ ಕಾಂಗ್ರೆಸ್’ ಎಂದುಟೀಕಿಸಿದ್ದ ರಾಜ್ಯದ ಗೃಹ ಸಚಿವ ನರೋತ್ತಮ ಮಿಶ್ರಾಅವರು ಪಟೇರಿಯಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆದೇಶಿಸಿದ್ದರು.

ಮೋದಿ ಕೊಲ್ಲಿ ಎಂದಿಲ್ಲ: ರಾಜ ಸ್ಪಷ್ಟನೆ
ತಮ್ಮ ಹೇಳಿಕೆ ವಿವಾದ ಸೃಷ್ಟಿಸಿದ ಬಳಿಕಸ್ಪಷ್ಟನೆ ನೀಡಿರುವ ರಾಜ ಪಟೇರಿಯಾ, ‘ನಾನು ಇಲ್ಲಿ ಹತ್ಯೆ ಪದವನ್ನು ಮೋದಿಯವರನ್ನು ಸೋಲಿಸಬೇಕೆಂಬ ಅರ್ಥದಲ್ಲಿ ಹೇಳಿದ್ದೇನೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಮಹಾತ್ಮ ಗಾಂಧಿಯ ಅನುಯಾಯಿ. ನಾನು ಯಾರನ್ನೂ ಕೊಲ್ಲುವ ಬಗ್ಗೆ ಮಾತನಾಡುವುದಿಲ್ಲ. ಸಂವಿಧಾನ, ದಲಿತರು, ಅಲ್ಪಸಂಖ್ಯಾತರನ್ನು ರಕ್ಷಿಸಲು ಮತ್ತು ನಿರುದ್ಯೋಗ ಸಮಸ್ಯೆ ನಿವಾರಿಸಲು ಪ್ರಧಾನಿ ಮೋದಿಯವರನ್ನು ಚುನಾವಣೆಯಲ್ಲಿ ಸೋಲಿಸಬೇಕಿದೆ ಎಂದಷ್ಟೇ ಹೇಳಿರುವೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.