ಮುಂಬೈ: ಸುಮಾರು ಮೂರು ದಶಕಗಳ ಹೋರಾಟದ ಬಳಿಕ ಮಹಾರಾಷ್ಟ್ರದ ಮರಾಠ ಸಮುದಾಯಕ್ಕೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ದೊರೆತಿದೆ. ಈ ಸಮುದಾಯಕ್ಕೆ ಶೇ 16ರಷ್ಟು ಮೀಸಲು ನೀಡುವ ಮಸೂದೆಗೆ ಮಹಾರಾಷ್ಟ್ರದ ಎರಡೂ ಸದನಗಳು ಯಾವುದೇ ಚರ್ಚೆ ಇಲ್ಲದೆ ಸರ್ವಾನುಮತದ ಅಂಗೀಕಾರ ನೀಡಿವೆ.

ಇದರೊಂದಿಗೆ ಮಹಾರಾಷ್ಟ್ರದ ಮೀಸಲಾತಿ ಪ್ರಮಾಣ ಶೇ 68ಕ್ಕೆ ಏರಿಕೆಯಾಗಿದೆ. ಮೀಸಲಾತಿ ಪ್ರಮಾಣ ಶೇ 50ರಷ್ಟನ್ನು ಮೀರಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಶೇ 69ರಷ್ಟು ಮೀಸಲು ಹೊಂದಿರುವ ತಮಿಳುನಾಡಿನ ನಂತರದ ಸ್ಥಾನಕ್ಕೆ ಈಗ ಮಹಾರಾಷ್ಟ್ರ ಬಂದಿದೆ. ವಿಶೇಷ ಕಾಯ್ದೆಯ ಮೂಲಕ ತಮಿಳುನಾಡಿನಲ್ಲಿ ಹೆಚ್ಚಿನ ಮೀಸಲಾತಿಗೆ ಅವಕಾಶ ಒದಗಿಸಲಾಗಿದೆ.

ಮಹಾರಾಷ್ಟ್ರದ ಒಟ್ಟು 11.25 ಕೋಟಿ ಜನಸಂಖ್ಯೆಯಲ್ಲಿ ಮರಾಠ ಸಮುದಾಯದ ಜನಸಂಖ್ಯೆ ಶೇ 30ಕ್ಕೂ ಹೆಚ್ಚು. ರಾಜಕೀಯವಾಗಿ ಪ್ರಬಲವಾದ ಈ ಸಮುದಾಯಕ್ಕೆ ಮೀಸಲಾತಿ ನೀಡಿರುವುದು ಬಿಜೆಪಿ–ಶಿವಸೇನಾ ಮೈತ್ರಿಕೂಟಕ್ಕೆ ರಾಜಕೀಯವಾಗಿ ದೊಡ್ಡ ಮುನ್ನಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.