ಮುಂಬೈ: ನಟಿ ಮತ್ತು ಸಾಮಾಜಿಕ ಕಾರ್ಯಕರ್ತೆ ಸ್ವರಾ ಭಾಸ್ಕರ್ ಅವರ ಪತಿ ಫಹಾದ್ ಅಹಮದ್ ಅವರು ಸಮಾಜವಾದಿ ಪಕ್ಷವನ್ನು (ಎಸ್ಪಿ) ತೊರೆದು ಶರದ್ ಪವಾರ್ ನೇತೃತ್ವದ ಎನ್ಸಿಪಿ ಸೇರಿದ್ದಾರೆ.

ಫಹಾದ್ ಅವರು ಅನುಶಕ್ತಿ ನಗರ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ. ಇಲ್ಲಿ ಅಜಿತ್ ಪವಾರ್ ನೇತೃತ್ವದ ಎನ್ಸಿಪಿಯು ಸನಾ ಮಲಿಕ್ ಅವರನ್ನು ಕಣಕ್ಕೆ ಇಳಿಸಿದೆ.

ಫಹಾದ್ ಮತ್ತು ಸ್ವರಾ ಅವರು 2023ರ ಫೆಬ್ರುವರಿಯಲ್ಲಿ ವಿವಾಹ ಆಗಿದ್ದಾರೆ. ಫಹಾದ್ ಅವರು ಕಳೆದ ಕೆಲವು ದಿನಗಳಿಂದ ಎನ್ಸಿಪಿ (ಎಸ್ಪಿ) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ, ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್ ಮತ್ತು ಹಿರಿಯ ಮುಖಂಡ ಡಾ. ಜಿತೇಂದ್ರ ಅಹ್ವಾಡ್ ಜೊತೆ ಸಂಪರ್ಕದಲ್ಲಿದ್ದರು.

‘ಫಹಾದ್ ಅಹಮದ್ ಅವರು ಬಹಳ ಒಳ್ಳೆಯ ಶಿಕ್ಷಣ ಪಡೆದಿರುವ ಮುಸ್ಲಿಂ ಯುವಕ. ಅವರು ದೇಶದ ಎಲ್ಲೆಡೆ ಸಾಮಾಜಿಕ ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ. ಜನರಿಗೆ ಅವರಂತಹ ನಾಯಕರು ಬೇಕು. ಅವರು ಮೊದಲು ಸಮಾಜವಾದಿ ಪಕ್ಷದಲ್ಲಿ ಇದ್ದರು. ನಾವು ಸಮಾಜವಾದಿ ಪಕ್ಷದ ಜೊತೆ ಸಮಾಲೋಚನೆ ನಡೆಸಿದೆವು. ಅವರೀಗ ನಮ್ಮ ಪಕ್ಷ ಸೇರಿದ್ದಾರೆ’ ಎಂದು ಪಾಟೀಲ್ ತಿಳಿಸಿದ್ದಾರೆ.

ಎಸ್ಪಿ ತೊರೆದು ಎನ್ಸಿಪಿ (ಎಸ್ಪಿ) ಸೇರುತ್ತಿರುವ ಕುರಿತ ಪ್ರಶ್ನೆಗೆ ಫಹಾದ್ ಅವರು, ‘ಎರಡೂ ಪಕ್ಷಗಳು ಸಮಾಜವಾದಕ್ಕೆ ಆದ್ಯತೆ ನೀಡುತ್ತವೆ. ಎರಡೂ ಪಕ್ಷಗಳು ಕುಟುಂಬ ಇದ್ದಂತೆ’ ಎಂದು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.