ಮುಂಬೈ: 2014ರ ಚುನಾವಣಾ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಸೀಟುಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದ ಶಿವಸೇನೆ ಇಲ್ಲಿಮಹಾ ಜನಾದೇಶ ಇರಲಿಲ್ಲ ಎಂದಿದೆ.

ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳ ಪೈಕಿ 200 ಕ್ಷೇತ್ರಗಳಲ್ಲಿ ಮಹಾ ಜನಾದೇಶ ಯಾತ್ರೆ ಕೈಗೊಂಡಿದ್ದರು. ಅಕ್ಟೋಬರ್ 24ರಂದು ಮತ ಎಣಿಕೆಗೆ ಮುನ್ನ ಮಾತನಾಡಿದ್ದ ಫಡಣವೀಸ್ 200ಕ್ಕಿಂತ ಹೆಚ್ಚು ಸೀಟುಗಳನ್ನು ಬಿಜೆಪಿ-ಶಿವಸೇನೆ ಮೈತ್ರಿಕೂಟ ಗೆಲ್ಲಲಿದೆ ಎಂದು ಹೇಳಿದ್ದರು.

ಚುನಾವಣಾ ಫಲಿತಾಂಶದ ಬಗ್ಗೆ ಸಾಮ್ನಾ ಸಂಪಾದಕೀಯದಲ್ಲಿ ವಿಶ್ಲೇಷಿಸಿದ ಶಿವಸೇನೆ, ಕಾಂಗ್ರೆಸ್ ಮತ್ತು ಎನ್ಸಿಪಿ ಇಲ್ಲಿ ಉತ್ತಮಗೊಂಡಿದೆ. ವಿರೋಧ ಪಕ್ಷಗಳನ್ನು ಇಲ್ಲದಂತೆ ಮಾಡುವುದು ಸುಲಭವಲ್ಲ ಎಂದು ಹೇಳಿದೆ.

ಇದನ್ನೂ ಓದಿ:ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ: ಸಂಪೂರ್ಣ ವಿವರ

ಬಿಜೆಪಿ ಎನ್ಸಿಪಿಯನ್ನು ಯಾವ ರೀತಿ ಒಡೆದಿತ್ತು ಎಂದರೆ ಶರದ್ ಪವಾರ್ ನೇತೃತ್ವದ ಪಕ್ಷಕ್ಕೆ ಭವಿಷ್ಯವೇ ಇಲ್ಲದಂತಾಗಿತ್ತು. ಆದರೆ ಎನ್ಸಿಪಿ ಕುಗ್ಗಲಿಲ್ಲ.ಈ ಚುನಾವಣೆಯಲ್ಲಿ ಎನ್ಸಿಪಿ 50ಕ್ಕಿಂತ ಹೆಚ್ಚು ಸೀಟುಗಳನ್ನು ಗಳಿಸಿದ್ದು, ಕಾಂಗ್ರೆಸ್ 44 ಸೀಟುಗಳನ್ನು ಗಳಿಸಿತ್ತು. ಅಧಿಕಾರದಲ್ಲಿರುವವರು ಧಿಮಾಕು ತೋರಿಸಬಾರದು ಎಂಬುದಕ್ಕೆ ಇದೊಂದು ಎಚ್ಚರಿಕೆ ಎಂದು ಶಿವಸೇನೆ ಹೇಳಿದೆ.

ಬಿಜೆಪಿ 2014ರ ಚುನಾವಣೆಯಲ್ಲಿ ಬಿಜೆಪಿ 122 ಸೀಟುಗಳನ್ನು ಗೆದ್ದುಕೊಂಡಿತ್ತು. ಈ ಬಾರಿ 105 ಸೀಟುಗಳನ್ನು ಗೆದ್ದಿದೆ. ಅದೇ ವೇಳೆ ಕಳೆದ ಚುನಾವಣೆಯಲ್ಲಿ 63 ಸೀಟುಗಳನ್ನು ಗೆದ್ದುಕೊಂಡಿದ್ದ ಶಿವಸೇನೆ ಈ ಬಾರಿ 56 ಸೀಟುಗಳನ್ನು ಗೆದ್ದಿದೆ. ಇತರ ಸಣ್ಣ ಪಕ್ಷಗಳು 25 ಸೀಟುಗಳನ್ನು ಗೆದ್ದುಕೊಂಡಿವೆ.

'ನೀವು ಅಧಿಕಾರದಲ್ಲಿ ಧಿಮಾಕು ತೋರಿಸಿದರೆ ಹೀಗೆ ಆಗುತ್ತದೆ' ಎಂದು ಸಾಮ್ನಾ ಸಂಪಾದಕೀಯ ಬಿಜೆಪಿಯನ್ನುದ್ದೇಶಿಸಿ ಹೇಳಿದೆ.

ಇದನ್ನೂ ಓದಿ:ವಿಧಾನಸಭೆ ಚುನಾವಣೆ | ಮಹಾರಾಷ್ಟ್ರದ ‘ರೈಸಿಂಗ್ ಸ್ಟಾರ್’ ಆದಿತ್ಯ ಠಾಕ್ರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.