ಮುಂಬೈ: ಮುಂಬೈ ಪ್ರವೇಶಿಸುವ ಮತ್ತು ನಿರ್ಗಮಿಸುವ ಎಲ್ಲ ಐದು ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಅನ್ನು ’ಮಹಾಯುತಿ‘ ಸರ್ಕಾರ ರದ್ದುಗೊಳಿಸಿದೆ.

ಮಹಾರಾಷ್ಟ್ರ ವಿಧಾನಸಭೆಗೆ ಶೀಘ್ರದಲ್ಲೇ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಹೀಗಾಗಿ, ಸರ್ಕಾರದ ಈ ನಿರ್ಧಾರ ಮಹತ್ವ ಪಡೆದಿದೆ.

ಮುಂಬೈಗೆ ಪ್ರವೇಶಿಸುವುದಕ್ಕಾಗಲೀ ಅಥವಾ ಮುಂಬೈನಿಂದ ನಿರ್ಗಮಿಸುವುದಕ್ಕಾಗಲೀ ಲಘು ಮೋಟಾರ್ ವಾಹನಗಳಿಗೆ ಇದುವರೆಗೆ ವಿಧಿಸುತ್ತಿದ್ದ ₹45 ಟೋಲ್ ಶುಲ್ಕವನ್ನು ರದ್ದುಗೊಳಿಸಲು ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಸಚಿವ ಸಂಪುಟ ಸೋಮವಾರ ನಿರ್ಧರಿಸಿದೆ.

ಕಾರು, ಜೀಪ್, ಮಿನಿ ಗೂಡ್ಸ್ ವಾಹನ ಸೇರಿ ಲಘು ವಾಹನಗಳಿಗೆ(ಎಲ್ಎಂವಿ) ಟೋಲ್ ಶುಲ್ಕ ವಿನಾಯಿತಿ ಕಲ್ಪಿಸಲಾಗಿದೆ.

‘ಮಹಾ’ ಸರ್ಕಾರದ ಈ ನಿರ್ಧಾರದಿಂದಾಗಿ ದಹಿಸರ್, ಆನಂದ್ ನಗರ್, ವೈಶಾಲಿ, ಐರೋಲಿ ಹಾಗೂ ಮುಲುಂದ್ ಟೋಲ್ ಕೇಂದ್ರಗಳಲ್ಲಿ ಇನ್ನುಮುಂದೆ ಎಲ್ಎಂವಿ ವಾಹನಗಳ ಮಾಲೀಕರು ಟೋಲ್ ಹಣ ಪಾವತಿಸಬೇಕಿಲ್ಲ. ಈ ಆದೇಶವು ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.

ಸಂಭ್ರಮಾಚರಣೆ: ಟೋಲ್ ರದ್ದತಿ ಘೋಷಣೆ ಹೊರಬೀಳುತ್ತಿದ್ದಂತೆಯೇ, ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಶಿವಸೇನೆ, ಬಿಜೆಪಿ ಹಾಗೂ ಎನ್ಸಿಪಿ ಕಾರ್ಯಕರ್ತರು ಟೋಲ್ ಕೇಂದ್ರಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

‘ನಿತ್ಯ ನೂರಕ್ಕೂ ಹೆಚ್ಚು ನಿರ್ಧಾರಗಳನ್ನು ಪ್ರಕಟಿಸುತ್ತಿರುವ ಸರ್ಕಾರ, ಅವುಗಳನ್ನು ಹೇಗೆ ತಾನೆ ಜಾರಿಗೊಳಿಸಲು ಸಾಧ್ಯ’ ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವತ್ ಕುಟುಕಿದ್ದಾರೆ.

ಸರ್ಕಾರದ ಈ ನಿರ್ಧಾರದಿಂದಾಗಿ ಪ್ರಯಾಣಿಕರ ಸಮಯ ಉಳಿತಾಯವಾಗಲಿದ್ದು ವಾಹನ ದಟ್ಟಣೆ ಹಾಗೂ ವಾಯು ಮಾಲಿನ್ಯವೂ ಗಣನೀಯವಾಗಿ ಇಳಿಕೆಯಾಗಲಿದೆ. ಇದೊಂದು ಐತಿಹಾಸಿಕ ನಿರ್ಧಾರ
ಏಕನಾಥ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.