ನಾಗಪುರ:ಸಂಸದೆ ನವನೀತ್ ರಾಣಾ ಹಾಗೂ ಅವರ ಪತಿ, ಶಾಸಕ ರವಿ ರಾಣಾ ಅವರು ಇತ್ತೀಚೆಗೆ ಕೊಲೆಯಾದ ಉಮೇಶ್ ಕೊಲ್ಹೆ ಅವರ ಮನೆ ಎದುರುಹನುಮಾನ್ ಚಾಲೀಸಾ ಪಠಿಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.

ಅಮರಾವತಿ ಕ್ಷೇತ್ರದ ಪಕ್ಷೇತರ ಸಂಸದೆ ನವನೀತ್ ಅವರು, ಕೊಲ್ಹೆ ಅವರನ್ನು ಕೊಂದವರನ್ನು ಸಾರ್ವಜನಿಕವಾಗಿ ನೇಣಿಗೇರಿಸಬೇಕು. ಇದರಿಂದದೇಶದಲ್ಲಿ ಇಂತಹ ಅಪರಾಧ ಕೃತ್ಯಗಳು ಮರುಕಳಿಸುವುದಿಲ್ಲ ಎಂದು ಹೇಳಿದ್ದಾರೆ. ಹಾಗೆಯೇ, ಈ ಪ್ರಕರಣದಲ್ಲಿ ಮಾದರಿ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರಲ್ಲಿ ಮನವಿ ಮಾಡಿದ್ದಾರೆ.

ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮಹಮ್ಮದರ ಬಗ್ಗೆ ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿತ್ತು. ಅಮರಾವತಿಯ ಔಷಧ ವ್ಯಾಪಾರಿ ಉಮೇಶ್ ಅವರು ನೂಪುರ್ ಶರ್ಮಾ ಹೇಳಿಕೆ ಬೆಂಬಲಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಆಪೋಸ್ಟ್ಗೂ, ಹತ್ಯೆಗೂ ಸಂಬಂಧವಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಹೇಳಿದ್ದರು.

ಮೂವರು ಆರೋಪಿಗಳು ಕೊಲ್ಹೆ ಅವರ ಮೇಲೆ ಜೂನ್ 21ರ ರಾತ್ರಿ 10.30ರ ಸಮಯದಲ್ಲಿ ಚಾಕುವಿನಿಂದ ದಾಳಿ ಮಾಡಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಕೊಲ್ಹೆ ಬದುಕುಳಿಯಲಿಲ್ಲ.

ಪ್ರಕರಣದ ತನಿಖೆ ನಡೆಸುತ್ತಿರುವರಾಷ್ಟ್ರೀಯ ತನಿಖಾ ದಳ (ಎನ್ಐಎ),ಎಲ್ಲಾ ಏಳು ಆರೋಪಿಗಳನ್ನು ತನ್ನ ವಶಕ್ಕೆ ಪಡೆದಿದೆ.

ಮುದಸ್ಸರ್ ಅಹ್ಮದ್ (22), ಶಾರುಖ್ ಪಠಾಣ್ (25), ಅಬ್ದುಲ್ ತೌಫಿಕ್ (24) ಶೋಯೆಬ್ ಖಾನ್ (22), ಅತೀಬ್ ರಶೀದ್ (22) ಮತ್ತು ಯೂಸುಫ್ ಖಾನ್ (32) ಮತ್ತು ಪ್ರಕರಣದ ಮಾಸ್ಟರ್ ಮೈಂಡ್ ಶೇಖ್ ಇರ್ಫಾನ್ ಶೇಖ್ ರಹೀಮ್ ಬಂಧಿತ ಆರೋಪಿಗಳು.

ಇವನ್ನೂ ಓದಿ
*ಹಿಡಿತವಿಲ್ಲದ ನಾಲಿಗೆ ದೇಶಕ್ಕೇ ಬೆಂಕಿ ಹಚ್ಚಿದೆ: ನೂಪುರ್ಗೆ 'ಸುಪ್ರೀಂ' ತರಾಟೆ
*ನೂಪುರ್ ಶರ್ಮಾ ಪರ ಪೋಸ್ಟ್: ಮಹಾರಾಷ್ಟ್ರದ ಅಮರಾವತಿಯಲ್ಲಿ ಔಷಧ ವ್ಯಾಪಾರಿಯ ಹತ್ಯೆ
*ಉದಯಪುರ ಹತ್ಯೆ ಆರೋಪಿಗಳು 10 ದಿನ ಪೊಲೀಸ್ ವಶಕ್ಕೆ: ಕೋರ್ಟ್ ಹೊರಗೆ ಜನರಿಂದ ಹಲ್ಲೆ
*ಅಮರಾವತಿ ಔಷಧ ವ್ಯಾಪಾರಿಯ ಹತ್ಯೆ: ಮಾಸ್ಟರ್ಮೈಂಡ್ ಬಂಧನ
*ಅಮರಾವತಿ ಔಷಧ ವ್ಯಾಪಾರಿ ಕೊಲೆ ಆರೋಪಿಗಳು ಎನ್ಐಎ ವಶಕ್ಕೆ
*ನೂಪುರ್ ಶರ್ಮಾ ಶಿರಚ್ಛೇದಕ್ಕೆ ಕರೆ ಕೊಟ್ಟಿದ್ದ ಧರ್ಮಗುರು ಸೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.