ಕೋಯಿಕ್ಕೋಡ್: ಶತಮಾನದ ದುರಂತ ಕಂಡ ಕೇರಳದಲ್ಲಿ ಪ್ರವಾಹದ ವೇಳೆ ಸಂತ್ರಸ್ತರು ಬೋಟನ್ನೇರಲು ನೆರವಾಗಲು ಯುವಕನೊಬ್ಬ ನೆಲಕ್ಕೆ ಬಾಗಿ ಬೆನ್ನು ನೀಡಿದ್ದ ದೃಶ್ಯಾವಳಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಅಂತೆಯೇ, ಯುವಕನ ನಡೆಗೆ ಪ್ರಶಂಸೆಗಳ ಮಹಾಪೂರವೇ ಹರಿದು ಬಂದಿದ್ದ ವಿಚಾರ ಎಲ್ಲರಿಗೂ ತಿಳಿದಿರುವುದೇ. ಇದೀಗ ಆ ಯುವಕನಿಗೆ ಕಾರು ತಯಾರಿಕಾ ಕಂಪೆನಿ ಮಹಿಂದ್ರದಿಂದ ಅಚ್ಚರಿಯ ಉಡುಗೊರೆಯೊಂದು ದೊರೆತಿದೆ.

ತಾನೂರ್ ಎಂಬಲ್ಲಿ ಮೀನಗಾರಿಕೆ ನಡೆಸಿಕೊಂಡಿದ್ದ ಆ ಯುವಕನ ಹೆಸರು ಕೆ.ಪಿ.ಜೈಸಲ್. ಅವರಿಗೆ ಕಳೆದ ವಾರವಷ್ಟೇ ಮಾರುಕಟ್ಟೆ ಬಂದಿರುವ ಮಹಿಂದ್ರದ ಹೊಸ ಉತ್ಪನ್ನ‘ಮಹಿಂದ್ರ ಮರಾಜೋ’ ಕಾರನ್ನು ಕೋಯಿಕ್ಕೋಡ್ಲ್ಲಿರುವ ಮಹಿಂದ್ರ ಕಾರು ಮಾರಾಟ ಘಟಕ ಈರಂ ಮೋಟಾರ್ಸ್ ವತಿಯಿಂದ ನೀಡಲಾಯಿತು.

₹ 9.99 ಲಕ್ಷ ಮೌಲ್ಯದ ಕಾರಿನ ಕೀ ಅನ್ನು ಕೇರಳ ಕಾರ್ಮಿಕ ಸಚಿವ ಟಿ.ಪಿ ರಾಮಕೃಷ್ಣನ್ ಅವರು ಜೈಸಲ್ಗೆ ನೀಡದರು.

ಈ ಸಂದರ್ಭದ ವಿಡಿಯೊವನ್ನು ಈರಂ ಮೋಟಾರ್ಸ್ ತನ್ನ ಫೇಸ್ಬುಕ್ ಪುಟದಲ್ಲಿ ಹಂಚಿಕೊಂಡಿದೆ.

ಪ್ರವಾಹ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದವರ ನೆರವು ಕಾರ್ಯಾಚರಣೆಯಲ್ಲಿ ಜೈಸಲ್ ಭಾಗವಹಿಸಿದ್ದರು. ಈ ವೇಳೆ ರಬ್ಬರ್ ಬೋಟ್ ಹತ್ತಲು ಕಷ್ಟವಾಗುತ್ತಿದ್ದ ಕಾರಣ ಹಿಂಜರಿಯುತ್ತಿದ್ದ ಮಹಿಳೆಯರಿಗೆ ಧೈರ್ಯ ನೀಡಿದ್ದ ಅವರು, ಬೆನ್ನು ಬಾಗಿಸಿ ನೀರಿನಲ್ಲಿ ಕುಳಿತು ಬೆನ್ನ ಮೇಲೆ ಕಾಲಿಟ್ಟು ಬೋಟ್ ಹತ್ತುವಂತೆ ಹೇಳಿದ್ದರು.

ಮಹಿಂದ್ರ ಸಮೂಹದ ಮುಖ್ಯಸ್ಥ ಆನಂದ ಮಹಿಂದ್ರ ಅವರು ಈ ಹಿಂದೆಯೂ ಇಂತಹ ಕಾರ್ಯಗಳನ್ನು ಮಾಡಿದ್ದಾರೆ. ವಿಶ್ವ ವೇಟ್ಲಿಫ್ಟಿಂಗ್ ಚಾಂಪಿಯನ್ ಮೀರಾಬಾಯಿ ಚಾನು ಅವರಿಗೆ ‘ಮಹಿಂದ್ರ ಟಿಯುವಿ300’ ಉಡುಗೊರೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.