ಮುಂಬೈ: ಮಾಲೆಗಾಂವ್ ಸ್ಪೋಟ ಪ್ರಕರಣದ ಆರೋಪಿಯಲ್ಲೊಬ್ಬರಾದ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್ ಠಾಕೂರ್ ಸೋಮವಾರ ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾದರು.

ಪ್ರಗ್ಯಾ ಠಾಕೂರ್ ಸೇರಿದಂತೆ ಇತರೆ ನಾಲ್ವರು ಆರೋಪಿಗಳಾದ ಲೆ.ಕನರ್ಲ್ ಪ್ರಸಾದ್ ಪುರೋಹಿತ್, ಸಮೀರ್ ಕುಲಕರ್ಣಿ, ರಮೇಶ್ ಉಪಾಧ್ಯಾಯ್ ಮತ್ತು ಸುಧಾಕರ್ ಚತುರ್ವೇದಿ ಸೋಮವಾರ ನ್ಯಾಯಾಲಯಕ್ಕೆ ಹಾಜರಾದರು. ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಅಜಯ್ ರಹಿರ್ಕಾರ್ ಮತ್ತು ಸುಧಾಕರ್ ದ್ವಿವೇದಿ ಗೈರಾಗಿದ್ದರು.ಪ್ರಕರಣದ ನಾಲ್ವರು ಆರೋಪಿಗಳೊಂದಿಗೆ ನ್ಯಾಯಾಲಯದಲ್ಲಿ ಆರೋಪಿಗಳಿಗೆ ಮೀಸಲಿಟ್ಟಿದ್ದ ಬಾಕ್ಸ್ಗಳಲ್ಲಿ ಪ್ರಗ್ಯಾ ಅವರನ್ನೂ ಕೂರಿಸಲಾಗಿತ್ತು.

ಆರೋಪಿ ದ್ವಿವೇದಿ ಗೈರಾದ ಕಾರಣ, ಸಾಕ್ಷ್ಯಿದಾರರ ವಿಚಾರಣೆ ನಡೆಸಲು ವಕೀಲರಿಗೆ ಸಾಧ್ಯವಾಗಲಿಲ್ಲ. ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿತು.

ಡಿಸೆಂಬರ್ 19, 2020 ರಂದು ವಿಶೇಷ ನ್ಯಾಯಾಧೀಶ ಪಿ ಆರ್ ಸಿತ್ರೆ ಅವರು ಠಾಕೂರ್ ಅವರಿಗೆ ನ್ಯಾಯಾಲಯಕ್ಕೆ ಹಾಜರಾಗಲು 'ಕೊನೆಯ ಅವಕಾಶ’ ನೀಡಿದ್ದರು.ಇದೇ ವೇಳೆ ಪ್ರಗ್ಯಾ ಅವರು ಎರಡು ಬಾರಿ ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು.

ಈ ಮೊದಲು, 2019 ರಲ್ಲಿ, ಈ ಪ್ರಕರಣದ ಏಳು ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. 2008ರಲ್ಲಿ ನಡೆದ ಈ ಸ್ಫೋಟ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ ತನಿಖೆ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.