ಮುಂಬೈ: 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಮತ್ತೊಬ್ಬ ಸಾಕ್ಷಿ ಇಲ್ಲಿನ ವಿಶೇಷ ನ್ಯಾಯಾಲಯ ಎದುರು ಶುಕ್ರವಾರ ‘ಪ್ರತಿಕೂಲ ಸಾಕ್ಷಿ’ಯಾಗಿ ಬದಲಾಗಿದ್ದಾರೆ.

ಇದರೊಂದಿಗೆ ಪ್ರಕರಣದಲ್ಲಿ 32 ಮಂದಿಯನ್ನು ಕೋರ್ಟ್ ‘ಪ್ರತಿಕೂಲ ಸಾಕ್ಷಿ’ ಎಂದು ಘೋಷಿಸಿದಂತಾಗಿದೆ.

ಮಧ್ಯಪ್ರದೇಶದ ಇಂದೋರ್ನ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರಕರಣದ ಆರೋಪಿಗಳಿಗೆ ಹೋಟೆಲ್ ಕೋಣೆ ಬುಕ್ ಮಾಡಿಕೊಟ್ಟಿದ್ದಾಗಿ ಭಯೋತ್ಪಾದನೆ ನಿಗ್ರಹ ದಳಕ್ಕೆ ಸಾಕ್ಷಿಯು ತಿಳಿಸಿದ್ದರು. ಆದರೆ ಶುಕ್ರವಾರ ಎನ್ಐಎ ವಿಶೇಷ ನ್ಯಾಯಾಲಯದ ಎದುರು ವಿಚಾರಣೆಗ ಹಾಜರಾದ ಸಂದರ್ಭದಲ್ಲಿ, ‘ತನಿಖಾ ಸಂಸ್ಥೆ ಎದುರು ಏನು ಹೇಳಿದ್ದೆ ಎಂದು ಮರೆತುಹೋಗಿದೆ’ ಎಂದು ಹೇಳಿದರು.

ನಂತರ ನ್ಯಾಯಾಲಯ ಇವರನ್ನೂ ‘ಪ್ರತಿಕೂಲ ಸಾಕ್ಷಿ’ ಎಂದು ಘೋಷಿಸಿತು.

ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಅವರು ಈ ಮೊಕದ್ದಮೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.