ಥಾಣೆ: ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ಗಾಗಿ ಮಾಡಿದ್ದ ಸಾಲವನ್ನು ತೀರಿಸಲು ಮಹಿಳೆಯನ್ನು ಕೊಂದು, ಆಭರಣಗಳನ್ನು ಕದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೋಪರ್ ಪ್ರದೇಶದ ನಿವಾಸಿ ಆಶಾ ಅರವಿಂದ್ ರಾಯ್ಕರ್ (65 ವರ್ಷ) ಎಂಬ ಮಹಿಳೆ ಶುಕ್ರವಾರ ತಮ್ಮ ಫ್ಲಾಟ್ನಲ್ಲಿ ಕತ್ತು ಹಿಸುಕಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದೇ ಕಟ್ಟಡದ ನಿವಾಸಿ ಸತೀಶ್ ವಿಚಾರೆ ಗುರುವಾರ ಮಧ್ಯಾಹ್ನ ಆಕೆಯ ಫ್ಲಾಟ್ಗೆ ಪ್ರವೇಶಿಸಿರುವುದು ಸಿಸಿಟಿವಿ ದೃಶ್ಯಾವಳಿಯಿಂದ ಕಂಡುಬಂದಿದೆ ಎಂದು ಪೊಲೀಸ್ ಉಪ ಆಯುಕ್ತ ಸಚಿನ್ ಗುಂಜಾಲ್ ಹೇಳಿದ್ದಾರೆ.

ತಾನು ಆನ್ಲೈನ್ ಕ್ರಿಕೆಟ್ ಬೆಟ್ಟಿಂಗ್ ವ್ಯಸನಿಯಾಗಿದ್ದು, ಅದಕ್ಕಾಗಿ ₹60 ಸಾವಿರ ಸಾಲ ಮಾಡಿದ್ದೆ. ಹಣ ಪಡೆಯಲು ಮಹಿಳೆಯನ್ನು ದರೋಡೆ ಮಾಡಲು ನಿರ್ಧರಿಸಿರುವುದಾಗಿ ವಿಚಾರಣೆ ವೇಳೆ ಆರೋಪಿ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ.

ರಾಯ್ಕರ್ ಅವರನ್ನು ಕತ್ತು ಹಿಸುಕಿ ಕೊಲೆಗೈದ ಬಳಿಕ ಆಕೆಯ ಸರ ಮತ್ತು ಕಿವಿಯೋಲೆಯನ್ನು ಕದ್ದು ಫ್ಲಾಟ್ಗೆ ಹೊರಗಿನಿಂದ ಬೀಗ ಹಾಕಿ ಆರೋಪಿ ಪರಾರಿಯಾಗಿದ್ದನು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.