ನವದೆಹಲಿ: ‘ಜಿ20 ಶೃಂಗಸಭೆ ನಡೆಯುತ್ತಿರುವ ಪ್ರಗತಿ ಮೈದಾನ ಪ್ರದೇಶದೆಡೆಗೆ ಆಟೊ ರಿಕ್ಷಾದಲ್ಲಿ ತುಪಾಕಿ ಮತ್ತು ಸ್ಫೋಟಕಗಳನ್ನು ಒಯ್ಯಲಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹುಸಿ ಎಚ್ಚರಿಕೆ ನೀಡಿದ ವ್ಯಕ್ತಿಯನ್ನು ಶುಕ್ರವಾರ ಬಂಧಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಬಂಧಿತ ಆರೋಪಿಯು ಉತ್ತರ ದೆಹಲಿಯ ಭಲಸ್ವಾ ಡೇರಿ ಪ್ರದೇಶದ ನಿವಾಸಿ. ಸಾರ್ವಜನಿಕರಲ್ಲಿ ಇಂಥ ಸುಳ್ಳು ಮಾಹಿತಿ ಹರಡಿದ ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಈತನ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು’ ಎಂದು ದೆಹಲಿ ಪೊಲೀಸರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.