ನವದೆಹಲಿ: ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಅಪ್ರಾಪ್ತ ಯುವತಿಯ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ, ಆಕೆಯ ಆಕ್ಷೇಪಾರ್ಹ ಫೋಟೊಗಳನ್ನು ಪೋಸ್ಟ್ ಮಾಡಿ, ಮೊಬೈಲ್ ಸಂಖ್ಯೆಯನ್ನು ಹಂಚಿಕೊಂಡ ಆರೋಪದ ಮೇಲೆ 22 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಆರೋಪಿ ಅರುಣ್ ಕುಮಾರ್ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯವನಾಗಿದ್ದು, ಕೆಟರಿಂಗ್ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಸಂತ್ರಸ್ತ ಯುವತಿ ಮತ್ತು ಆರೋಪಿ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ, ಸಂಪರ್ಕದಲ್ಲಿದ್ದರು. ನಂತರ ಆಕೆ, ಯುವಕನೊಂದಿಗೆ ಮಾತನಾಡಲು ನಿರಾಕರಿಸಿ, ಸಂಪರ್ಕವನ್ನು ಕೊನೆಗೊಳಿಸಿದ್ದಾಳೆ. ಇದಾದ ಬಳಿಕ ಅರುಣ್ ಕುಮಾರ್, ಆಕೆಯ ಹೆಸರಿನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ ಆಕೆಯ ಫೋಟೊಗಳನ್ನು ಅಪ್ಲೋಡ್ ಮಾಡಿ, ಮೊಬೈಲ್ ಸಂಖ್ಯೆಯನ್ನು ಹಂಚಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪರಿಚಿತರು ನನ್ನ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ, ನನ್ನ ಆಕ್ಷೇಪಾರ್ಹ ಫೋಟೊಗಳು, ಮೊಬೈಲ್ ನಂಬರ್ ಅನ್ನು ಹಂಚಿಕೊಂಡಿರುವುದಾಗಿ 17 ವರ್ಷದ ಯುವತಿ ನೀಡಿದ ಹೇಳಿಕೆಯ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಲಾಗಿತ್ತು. ವಿಚಾರಣೆ ಬಳಿಕ ಆರೋಪಿ ಕುಮಾರ್ನನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ರೋಹಿತ್ ಮೀನಾ ಹೇಳಿದ್ದಾರೆ.

ಇವನ್ನೂ ಓದಿ: ಅರುಣಾಚಲ ಪ್ರದೇಶದ 11 ಹಳ್ಳಿಗಳ ಹೆಸರು ಬದಲಾವಣೆ: ತಳ್ಳಿ ಹಾಕಿದ ಭಾರತ

ಅಂಥ ಕ್ಷುಲ್ಲಕ ರಾಜಕೀಯ ಎಂದೂ ಮಾಡುವುದಿಲ್ಲ: ವಾಹಿನಿ ವರದಿಗೆ ಸಿದ್ದರಾಮಯ್ಯ ಬೇಸರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.