ಮುಂಬೈ: ದಕ್ಷಿಣ ಮುಂಬೈನಲ್ಲಿ 15 ವರ್ಷದ ಬಾಲಕ ಚಲಾಯಿಸುತ್ತಿದ್ದ ಬೈಕ್ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು ಇರ್ಫಾನ್ ಶೇಖ್ (32) ಎಂದು ಗುರುತಿಸಲಾಗಿದೆ.
.ಪೋಶೆ ಅಪಘಾತ ಪ್ರಕರಣಕ್ಕೆ ತಿರುವು: ಕಾರು ಚಲಾಯಿಸಿದ್ದು ಮಗನಲ್ಲ ಎಂದ ಆರೋಪಿಯ ತಂದೆ.ಪೋಶೆ ಕಾರು ಅಪಘಾತ: ಜೂ. 5ರವರೆಗೆ ಬಾಲಕ ವೀಕ್ಷಣಾ ಕೇಂದ್ರಕ್ಕೆ.
ಕಳೆದ ಐದು ದಿನಗಳ ಹಿಂದೆ ಪುಣೆಯಲ್ಲಿ 17 ವರ್ಷದ ಬಾಲಕ ಚಲಾಯಿಸುತ್ತಿದ್ದ ಪೋಶೆ ಕಾರು ಅಪಘಾತಕ್ಕೀಡಾಗಿ ಇಬ್ಬರು ಸಾವನ್ನಪ್ಪಿದ ಘಟನೆ ನಡೆದ ಮೂರು ದಿನಗಳ ಬಳಿಕ ಈ ಅಪಘಾತ ಜರುಗಿದೆ.

ಮಜಗಾಂವ್ ಪ್ರದೇಶದಲ್ಲಿ ನಿನ್ನೆ (ಗುರುವಾರ) ಈ ಅಪಘಾತ ಸಂಭವಿಸಿದೆ. ಗಾಯಗೊಂಡಿದ್ದ ಇರ್ಫಾನ್ ಶೇಖ್ ಅವರನ್ನು ಜೆ. ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.

ಅಪಘಾತವೆಸಗಿದ ಬಾಲಕ ಮತ್ತು ಆತನ ತಂದೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
.ಪೋಶೆ ಕಾರು ಅಪಘಾತ: ಆರೋಪಿಗೆ ಪಿಜ್ಜಾ, ಬರ್ಗರ್: ಮೃತರ ಬಗ್ಗೆ ತನಿಖೆ– ಅಂಬೇಡ್ಕರ್.ಪೋಶೆ ಕಾರು ಅಪಘಾತ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ MH ಮುಖ್ಯಮಂತ್ರಿ ಸೂಚನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.