ನವದೆಹಲಿ: ನಗರದ ಮೂರು ಕಡೆ ತ್ಯಾಜ್ಯ ವಿಲೇವಾರಿ ಸ್ಥಳ ತೆರವು, ಭ್ರಷ್ಟಾಚಾರ ಕೊನೆಗಾಣಿಸುವುದು ಮತ್ತು ಉದ್ಯೋಗಿಗಳಿಗೆ ಸಕಾಲಿಕ ವೇತನ ಪಾವತಿ ಸೇರಿದಂತೆ ಹತ್ತು ಭರವಸೆ ಈಡೇರಿಸುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಡಿ. 4 ರಂದು ನಡೆಯಲಿರುವ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಿರುವ ಕೇಜ್ರಿವಾಲ್, ಪಾಲಿಕೆಯಲ್ಲಿ ತನ್ನ 15 ವರ್ಷಗಳ ಅಧಿಕಾರಾವಧಿಯಲ್ಲಿ ಏನನ್ನೂ ಮಾಡದ ಬಿಜೆಪಿಗಿಂತ ಭಿನ್ನವಾಗಿ ಎಎಪಿ ಕೆಲಸ ಮಾಡುತ್ತದೆ ಮತ್ತು ನೀಡಿದ ಭರವಸೆಗಳನ್ನು ಈಡೇರಿಸುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚುನಾವಣೆಯಲ್ಲಿ ಬಿಜೆಪಿ 20 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ಅವರು ಹೇಳಿದ್ದಾರೆ.

‘ಸರಳ ಆನ್‌ಲೈನ್ ಪ್ರಕ್ರಿಯೆ ಕಟ್ಟಡ ನಕ್ಷೆ ಅನುಮೋದನೆ ಪರಿಚಯಿಸುವುದು,ಪಾರ್ಕಿಂಗ್ ಸ್ಥಳದ ಸಮಸ್ಯೆಗೆ ಶಾಶ್ವತ ಮತ್ತು ಪ್ರಾಯೋಗಿಕ ಪರಿಹಾರ ಒದಗಿಸುವುದು, ರಸ್ತೆಗಳಲ್ಲಿ ಉಪದ್ರವ ಉಂಟು ಮಾಡುವ ಬಿಡಾಡಿ ಪ್ರಾಣಿಗಳ ನಿಯಂತ್ರಣ, ಹದಗೆಟ್ಟ ರಸ್ತೆಗಳನ್ನು ಸರಿಪಡಿಸುವ ಮೂಲಕಪಾಲಿಕೆಯನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲಾಗುವುದು’ ಎಂದು ಎಎಪಿ ರಾಷ್ಟ್ರೀಯ ಸಂಚಾಲಕರು ಹೇಳಿದರು.

ಪಾಲಿಕೆ ಶಾಲೆಗಳು ಮತ್ತು ಔಷಧಾಲಯಗಳ ಗುಣಮಟ್ಟ ಸುಧಾರಣೆ, ನಾಗರಿಕ ಸಂಸ್ಥೆಯ ಅಡಿ ಉದ್ಯಾನಗಳ ಸೌಂದರ್ಯೀಕರಣ, ಉದ್ಯೋಗಿಗಳಿಗೆ ಸಕಾಲಿಕ ವೇತನ ಪಾವತಿ ಖಚಿತಪಡಿಸುತ್ತೇವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.