ಸೇಲಂ: ವೈದ್ಯಕೀಯ ಶಿಕ್ಷಣ ಆಕಾಂಕ್ಷಿಯಾಗಿದ್ದ 19 ವರ್ಷದ ಯುವಕ ಧನುಷ್, ಮೂರನೇ ಬಾರಿಗೆ ‘ನೀಟ್’ ಪರೀಕ್ಷೆಗೆ ಹಾಜರಾಗುವ ಮೊದಲೇ ಮೆಟ್ಟೂರು ಸಮೀಪದ ಕೂಜಾಹೈಯುರುವಿನ ತನ್ನ ನಿವಾಸದಲ್ಲಿ ಭಾನುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರೀಕ್ಷೆ ಆರಂಭಕ್ಕೂ ಕೆಲವೇ ಗಂಟೆ ಮೊದಲು ಈ ಪ್ರಕರಣ ವರದಿಯಾಗಿದೆ.

ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಮೊದಲು ಗುರುತಿಸಿದ ಯುವಕನ ತಾಯಿ ಈ ಬಗ್ಗೆ ಮಾಹಿತಿ ನೀಡಿದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು. ಕೃತ್ಯಕ್ಕೂ ಮುನ್ನ ಪತ್ರ ಬರೆದಿಟ್ಟಿದ್ದಾರೆಯೇ ಎಂಬ ಪ್ರಶ್ನೆಗೆ ನಿರ್ದಿಷ್ಟ ಉತ್ತರ ನೀಡದ ಅವರು, ‘ನೀಟ್ ಪರೀಕ್ಷೆಗೆ ಮೂರನೇ ಬಾರಿಗೆ ಹಾಜರಾಗಬೇಕಿತ್ತು. ಕಳೆದೆರಡು ಬಾರಿ ವಿಫಲರಾಗಿದ್ದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.