ಶ್ರೀನಗರ: ತಮ್ಮ ವಿರುದ್ಧದ ಅವಹೇಳನಕಾರಿ ಹೇಳಿಕೆಗೆ ಮಾನಹಾನಿ ಪ್ರಕರಣದಡಿ ₹10 ಕೋಟಿ ಪರಿಹಾರ ಕೋರಿ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಶುಕ್ರವಾರ ಜಮ್ಮು–ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ.

ಮೆಹಬೂಬಾ ಅವರು ಈಗ ಕೈಬಿಟ್ಟಿರುವ ರಾಜ್ಯದ ಜನರಿಗೆ ಶುಲ್ಕದ ಆಧಾರದಲ್ಲಿ ಭೂ ಸ್ವಾಮ್ಯದ ಹಕ್ಕುಗಳನ್ನು ನೀಡುವ ರೋಶ್ನಿ ಯೋಜನೆಯ ಫಲಾನುಭವಿ ಎಂದು ಮಲಿಕ್ ಆರೋಪ ಮಾಡಿದ ನಂತರದಲ್ಲಿ ಈ ನೋಟಿಸ್ ನೀಡಲಾಗಿದೆ.

‘ನಿಮ್ಮ ಹೇಳಿಕೆಯಿಂದ ನಮ್ಮ ಕಕ್ಷಿದಾರರು ಕಳೆದುಕೊಂಡಿರುವ ಸಮಾಜದಲ್ಲಿನ ಸ್ಥಾನಮಾನ ಮತ್ತು ಗಳಿಸಿರುವ ಉತ್ತಮ ಹೆಸರನ್ನು ಯಾವ ಮೊತ್ತದ ಹಣವೂ ತುಂಬಿಕೊಡಲು ಸಾಧ್ಯವಿಲ್ಲ. ಆದರೂ ಅವರು ತಮ್ಮ ಮಾನಹಾನಿಗೆ ಪರಿಹಾರವಾಗಿ ನಿಮ್ಮ ಮೇಲೆ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ’ ಎಂದು ಮೆಹಬೂಬಾ ಅವರ ಪರ ವಕೀಲ ಅನಿಲ್ ಸೇಥಿ ನೋಟಿಸ್ನಲ್ಲಿ ಹೇಳಿದ್ದಾರೆ.

30 ದಿನಗಳ ಒಳಗೆ ಮಲಿಕ್ ₹ 10 ಕೋಟಿ ಪಾವತಿಸಬೇಕು ಇಲ್ಲವೇ ಕಾನೂನು ಕ್ರಮಗಳನ್ನು ಎದುರಿಸಬೇಕು ಎಂದೂ ನೋಟಿಸ್ನಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.