ಐಜ್ವಾಲ್: ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಜೆಡ್ಪಿಎಂ ಪಕ್ಷದ 73 ವರ್ಷದ ಮಾಜಿ ಐಪಿಎಸ್ ಅಧಿಕಾರಿ, ಇಂದಿರಾಗಾಂಧಿ ಅವರಿಗೆ ಭದ್ರತಾಧಿಕಾರಿಯಾಗಿದ್ದ ಲಾಲ್ದುಹೋಮಾ ಅವರು ಮುಖ್ಯಮಂತ್ರಿ ಪಟ್ಟವೇರಲು ಸಜ್ಜಾಗಿದ್ದಾರೆ.

ಲಾಲ್ದುಹೋಮಾ ಅವರು ಎಂಎನ್ಎಫ್ ಪಕ್ಷದ ಅಭ್ಯರ್ಥಿ ವಿರುದ್ಧ 2,982 ಮತಗಳಿಂದ ಜಯ ಸಾಧಿಸಿದ್ದಾರೆ.

ಲಾಲ್ದುಹೋಮ ಅವರು 1984 ರಲ್ಲಿ ಕಾಂಗ್ರೆಸ್ನಲ್ಲಿ ಟಿಕೆಟ್ ಪಡೆದು ಮಿಜೋರಾಂ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರು. ಆದರೆ ಪೀಪಲ್ಸ್ ಕಾನ್ಫರೆನ್ಸ್ ಪಕ್ಷದ ಅಭ್ಯರ್ಥಿ ವಿರುದ್ಧ 846 ಮತಗಳ ಅಂತರದಿಂದ ಸೋತರು. ಆದರೆ ಅದೇ ವರ್ಷ ಲೋಕಸಭೆಗೆ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾಗಿದ್ದರು.

2019ರಲ್ಲಿ ರಾಜಕೀಯ ಪಕ್ಷವಾಗಿ ನೊಂದಾಯಿಸಿಕೊಂಡಿದ್ದ ಜಡ್ಪಿಎಂ ಪಕ್ಷ ಈ ಬಾರಿಯ ವಿಧಾನಸಭೆ ಚುನವಾಣೆಯಲ್ಲಿ ಬಹುಮತ ಪಡೆದುಕೊಂಡಿದೆ.

ರಾಜ್ಯದಲ್ಲಿ ಆಡಳಿತದಲ್ಲಿದ್ದ ಮಿಜೋ ನ್ಯಾಷನಲ್ ಫ್ರಂಟ್ (ಎಂಎನ್ಎಫ್) ಅಧಿಕಾರ ಕಳೆದುಕೊಂಡಿದೆ. ಹೊಸ ಪ್ರಾದೇಶಿಕ ಪಕ್ಷ ಜೋರಾಂ ಪೀಪಲ್ಸ್ ಮೂವ್ಮೆಂಟ್ (ಜೆಡ್ಪಿಎಂ) 27 ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ 40 ಸ್ಥಾನಗಳುಳ್ಳ ವಿಧಾನಸಭೆಯಲ್ಲಿ ಬಹುಮತ ಸಾಧಿಸಿದೆ.
. Mizoram Result: ಎಂಎನ್ಎಫ್ಗೆ ಆಘಾತ; ಅಧಿಕಾರಕ್ಕೇರಿದ ಜೆಡ್ಪಿಎಂ.Mizoram Election Result: ಹೊಸಪಕ್ಷ ZPMಗೆ ಅಧಿಕಾರ ನೀಡಿದ ಜನ; CM, DCMಗೂ ಸೋಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.