ಐಜಾಲ್: ಈಶಾನ್ಯ ರಾಜ್ಯ ಮಿಜೋರಾಂ ವಿಧಾನಸಭಾ ಚುನಾವಣೆಯಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಮುನ್ನಡೆ ಸಾಧಿಸಿದೆ. ಮಿಜೋರಾಂ ಮುಖ್ಯಮಂತ್ರಿ, ಕಾಂಗ್ರೆಸ್ ಅಭ್ಯರ್ಥಿ ಲಾಲ್ ಥನ್ಹಾವ್ಲಾ ಅವರುಚಂಪೈ ದಕ್ಷಿಣ ಕ್ಷೇತ್ರದಲ್ಲಿ ಪರಾಭವಗೊಂಡಿರುವುದು ಕಾಂಗ್ರೆಸ್‌ಗೆ ಹೊಡತ ನೀಡಿದೆ. ಈ ಕ್ಷೇತ್ರದಲ್ಲಿ ಎಂಎನ್‍ಎಫ್ ಪಕ್ಷದ ಟಿಜೆ ಲಾಲ್ನುಂಟ್ಲುಂಗಾ ಗೆಲುವು ಸಾಧಿಸಿದ್ದಾರೆ.

ಲಾಲ್ ಥನ್ಹಾವ್ಲಾ ಅವರು ಸೇರ್‍ಛಿಪ್ ಕ್ಷೇತ್ರದಲ್ಲಿಯೂ ಕಣಕ್ಕಿಳಿದಿದ್ದು, ಅಲ್ಲಿಯೂ ಪರಾಭವಗೊಂಡಿದ್ದಾರೆ.

ಮಿಜೊರಾಂನಲ್ಲಿ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ,ಈ ಬಾರಿ ಕಾಂಗ್ರೆಸ್‍ಗೆ ಅಧಿಕಾರ ಕೈ ತಪ್ಪಿರುವುದರಿಂದ ಈಶಾನ್ಯ ಭಾರತ ರಾಜ್ಯಗಳು ಕಾಂಗ್ರೆಸ್ ಮುಕ್ತ ಆಗಿವೆ.

ಮೂರನೇ ಬಾರಿಯೂ ಗದ್ದುಗೆಗೇರುವ ಕನಸು ಹೊತ್ತು ಕಾಂಗ್ರೆಸ್ ಇಲ್ಲಿ ಕಣಕ್ಕಿಳಿದಿತ್ತು.ಆದರೆ ರಾಜ್ಯದ ಪ್ರಮುಖ ವಿಪಕ್ಷವಾದ ಮಿಜೋ ನ್ಯಾಷನಲ್ ಫ್ರಂಟ್ ಮುನ್ನಡೆ ಸಾಧಿಸುವಲ್ಲಿ ಸಫಲಾಯಿತು. ಕಳೆದ ಬಾರಿ 40 ಸೀಟುಗಳಲ್ಲಿ 34 ಸೀಟು ಗೆದ್ದು ಕಾಂಗ್ರೆಸ್ ಅಧಿಕಾರಕ್ಕೇರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.