ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯುದ್ಧದಲ್ಲಿ ಗೆಲುವಿಗೆ ತಂತ್ರಜ್ಞಾನದ ಅಳವಡಿಕೆ ಅಗತ್ಯ: ಚೌಧರಿ

Published 15 ಜೂನ್ 2024, 15:55 IST
Last Updated 15 ಜೂನ್ 2024, 15:55 IST
ಅಕ್ಷರ ಗಾತ್ರ

ಹೈದರಾಬಾದ್: ತಂತ್ರಜ್ಞಾನದ ಸಮರ್ಪಕ ಬಳಕೆ ಮತ್ತು ಪರಿಣಾಮಕಾರಿ ಅಳವಡಿಕೆಯು ಆಧುನಿಕ ಕಾಲದ ಯುದ್ಧದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿನ ದುಂಡಿಗಲ್‌ನಲ್ಲಿರುವ ವಾಯುಪಡೆ ಅಕಾಡೆಮಿಯಲ್ಲಿ ಶನಿವಾರ ನಡೆದ ‘ಕಂಬೈಡ್‌ ಗ್ರಾಜುಯೇಶನ್ ಪರೇಡ್‌’ (ಸಿಜಿಪಿ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಆಧುನಿಕ ಯುದ್ಧದ ತಂತ್ರಗಾರಿಕೆಯು ನಿರಂತರವಾಗಿ ವಿಕಸನಗೊಳ್ಳುತ್ತಲೇ ಇದೆ. ಇನ್ನು ಮುಂದೆ ಯುದ್ಧಗಳು ಸಂಕೀರ್ಣ ಡೇಟಾ ನೆಟ್‌ವರ್ಕ್‌ಗಳು ಮತ್ತು ಸುಧಾರಿತ ಸೈಬರ್ ತಂತ್ರಜ್ಞಾನಗಳಿಂದ ಹೆಚ್ಚು ಪ್ರಭಾವಿತವಾಗಿರುತ್ತದೆ ಎಂದು ಹೇಳಿದರು.

ವೃತ್ತಿಪರತೆ, ಆಕ್ರಮಣಶೀಲತೆ ಮತ್ತು ಸಾಮರ್ಥ್ಯವು ಒಬ್ಬ ನಾಯಕನಲ್ಲಿರಬೇಕಾದ ಮೂರು ಮುಖ್ಯ ಗುಣಗಳಾಗಿವೆ. ಅದೇ ರೀತಿ, ಚಿಂತಕರಾಗಿರುವ ನಾಯಕರ ಅಗತ್ಯವೂ ಇದೆ ಎಂದರು. 

‘ನಿಮ್ಮ ಜೀವನದಲ್ಲಿ ಈ ಅಸಾಮಾನ್ಯ ಪ್ರಯಾಣವನ್ನು ಪ್ರಾರಂಭಿಸುತ್ತಿರುವಾಗ, ಭಾರತೀಯ ವಾಯುಪಡೆಯ ಪ್ರಮುಖ ಮೌಲ್ಯಗಳಾದ ಗುರಿ ಈಡೇರಿಸುವ ಛಲ, ಸಮಗ್ರತೆ ಮತ್ತು ಉತ್ಕೃಷ್ಟತೆ – ನಿಮಗೆ ದಾರಿದೀಪವಾಗಲಿ’ ಎಂದು ಅವರು ಹೊಸದಾಗಿ ನೇಮಕಗೊಂಡ ಅಧಿಕಾರಿಗಳಿಗೆ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT