ಜೈಪುರ: ರಾಜಸ್ಥಾನ ಚುನಾವಣಾ ಪ್ರಚಾರದ ಕೊನೆಯ ದಿನವಾದ ಬುಧವಾರ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಎರಡು ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಷಣ ಮಾಡಿದರು. ದೌಸಾ ಪಟ್ಟಣದ ಪ್ರಚಾರ ಸಭೆಯ ಭಾಷಣದೊಂದಿಗೆ ತಮ್ಮ ಚುನಾವಣಾ ಪ್ರಚಾರಕ್ಕೂ ಅಂತ್ಯಹಾಡಿದರು.

ಮಧ್ಯಪ್ರದೇಶ ಮತ್ತು ಛತ್ತೀಸಗಡಕ್ಕೆ ಹೋಲಿಸಿದರೆ ಮೋದಿ ರಾಜಸ್ಥಾನದ ಬಗ್ಗೆ ಅನುಸರಿಸಿದ ಕಾರ್ಯತಂತ್ರ ಭಿನ್ನವಾಗಿತ್ತು. ಮೂರೂ ರಾಜ್ಯಗಳಲ್ಲಿಯೂ ಬಿಜೆಪಿ ಮುಖ್ಯಮಂತ್ರಿಗಳು ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ. ಆದರೆ ಅದನ್ನು ಬಿಜೆಪಿ ಎದುರಿಸುತ್ತಿರುವ ರೀತಿ ಮಾತ್ರ ಭಿನ್ನ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಮೋದಿ ಸ್ಥಳೀಯ ನಾಯಕರು ಮತ್ತು ಮುಖ್ಯಮಂತ್ರಿಗಳಿಗೆ ಚುನಾವಣೆ ನಿಭಾಯಿಸುವ ಹೊಣೆಗಾರಿಕೆಯನ್ನು ವಹಿಸಿಕೊಟ್ಟಿದ್ದಾರೆ. ಆದರೆ ರಾಜಸ್ಥಾನದಲ್ಲಿ ಮಾತ್ರ ಕೊನೆಯ ಘಳಿಗೆಯವೆಗೂ ಮೋದಿಯೇ ಮತದಾರರನ್ನು ಒಲಿಸಿಕೊಳ್ಳಲು ಶ್ರಮಿಸಿದರು. ಈಚೆಗೆ ಚುನಾವಣೆ ಎದುರಿಸಿದ ಉತ್ತರ ಪ್ರದೇಶ, ಗುಜರಾತ್ ಮತ್ತು ತ್ರಿಪುರದಲ್ಲಿ ಬಿಜೆಪಿ ಅನುಸರಿಸಿದ ಕಾರ್ಯತಂತ್ರವನ್ನೇ ರಾಜಸ್ಥಾನದಲ್ಲಿಯೂ ಬಿಜೆಪಿ ಪುನರಾವರ್ತಿಸಿದ್ದು ವಿಶೇಷ.

ಯಾವೆಲ್ಲಾ ರಾಜ್ಯಗಳಲ್ಲಿ ಸ್ಥಳೀಯ ಬಿಜೆಪಿ ನಾಯಕತ್ವ ದುರ್ಬಲವಾಗಿದೆಯೋ, ಚುನಾವಣೆಯಲ್ಲಿ ತನ್ನ ಪ್ರಭಾವವೇ ಹೆಚ್ಚು ಕೆಲಸ ಮಾಡಬಹುದು ಎನಿಸುತ್ತದೆಯೋ ಅಂಥ ರಾಜ್ಯಗಳಲ್ಲಿ ಮೋದಿ ಕೊನೆಯವರೆಗೂ ಪ್ರಚಾರ ನಡೆಸುತ್ತಾರೆ. ಉತ್ತರ ಪ್ರದೇಶ, ತ್ರಿಪುರಗಳಲ್ಲಿ ಸ್ಥಳೀಯ ಮುಖವೇ ಇರಲಿಲ್ಲ. ಹೀಗಾಗಿ ಮೋದಿ ಚುನಾವಣೆ ಪ್ರಚಾರದಲ್ಲಿ ರಾರಾಜಿಸಿದರು.

ಗುಜರಾತ್ನಲ್ಲಿ ಮುಖ್ಯಮಂತ್ರಿ ವಿಜಯ್ ರೂಪಾಣಿಗೆ ಹೇಳಿಕೊಳ್ಳುವಂಥ ಪ್ರಭಾವ ಇರಲಿಲ್ಲ. ರಾಜಸ್ಥಾನದಲ್ಲಿ ವಸುಂಧರರಾಜೆ ಅವರ ಜನಪ್ರಿಯತೆ ಆತಂಕಕಾರಿ ಪ್ರಮಾಣದಲ್ಲಿ ಕುಸಿದಿತ್ತು. ಹೀಗಾಗಿ ಈ ಎಲ್ಲ ರಾಜ್ಯಗಳ ಚುನಾವಣಾ ಪ್ರಚಾರದಲ್ಲಿ ಮೋದಿ ಪ್ರಮುಖ ಪಾತ್ರ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.