ಭೋಪಾಲ್: ಮಧ್ಯಪ್ರದೇಶದ ಐತಿಹಾಸಿಕ ನಗರ ಉಜ್ಜೈನಿ ಮಹಾಕಾಲೇಶ್ವರ ದೇವಸ್ಥಾನದಿಂದ ಪ್ರಸಿದ್ಧಿ. ಕಳೆದ ವರ್ಷ ಈ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿ, ಮಹಾಕಾಲ ಲೋಕ ಕಾರಿಡಾರ್ ನಿರ್ಮಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಈ ಕಾರಿಡಾರ್ ಲೋಕಾರ್ಪಣೆ ಮಾಡಿದ ನಂತರ ಉಜ್ಜೈನಿ ನಗರ ದೇಶದ ಗಮನವನ್ನೇ ಸೆಳೆದಿತ್ತು.

ಸೋಮವಾರ ನಡೆದ ರಾಜಕೀಯ ಬೆಳವಣಿಗೆಯಿಂದಾಗಿಯೂ ಈ ನಗರ ಮತ್ತೊಮ್ಮೆ ದೇಶದ ಗಮನ ಸೆಳೆದಿದೆ. ಈ ನಗರವನ್ನು ಪ್ರತಿನಿಧಿಸುವ ಶಾಸಕ, 58 ವರ್ಷದ ಮೋಹನ್ ಯಾದವ್, ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವುದೇ ಇದಕ್ಕೆ ಕಾರಣ.

ಮತ್ತೊಂದೆಡೆ, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜಾತಿ ಗಣತಿ ವಿಷಯವನ್ನು ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ ಪ್ರಬಲ ಅಸ್ತ್ರವನ್ನಾಗಿ ಮಾಡುವ ಸಾಧ್ಯತೆ ಇರುವ ಕಾರಣದಿಂದಾಗಿಯೂ, ಮೋಹನ್ ಅವರ ಆಯ್ಕೆ ಮಹತ್ವ ಪಡೆದಿದೆ.

2021ರಲ್ಲಿ ಬದಲಾದ ರಾಜಕೀಯ ಸನ್ನಿವೇಶದಿಂದಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಾಗ, ಮೋಹನ್ ಯಾದವ್ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದರು. ಆಗ, ಧಾರ್ಮಿಕ ಮಹಾಕಾವ್ಯ ‘ರಾಮಚರಿತಮಾನಸ’ ವನ್ನು ಕಾಲೇಜು ಶಿಕ್ಷಣದಲ್ಲಿ ಐಚ್ಛಿಕ ವಿಷಯವನ್ನಾಗಿ ಮಾಡುವುದಾಗಿ ಘೋಷಿಸಿ, ಗಮನ ಸೆಳೆದಿದ್ದರು.

ಕಾಲೇಜು ದಿನಗಳಿಂದಲೂ ಪ್ರಖರ ಹಿಂದುತ್ವ ಪ್ರತಿಪಾದಕರಾಗಿರುವ ಮೋಹನ್, ಸಹಜವಾಗಿಯೇ ಆರ್‌ಎಸ್‌ಎಸ್ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಪ್ರಮುಖ ಒಬಿಸಿ ನಾಯಕರಾಗಿಯೂ ಗುರುತಿಸಿಕೊಂಡಿದ್ದಾರೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಒಬಿಸಿಗಳ ಪ್ರಮಾಣ ಶೇ 48ಕ್ಕೂ ಅಧಿಕ.

ಶಿಕ್ಷಣ–ನಾಯಕತ್ವ ಗುಣ: ಉಜ್ಜೈನಿಯ ಮಾಧವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಸಂಘದ ಜಂಟಿ ಕಾರ್ಯದರ್ಶಿಯಾಗಿ 1982ರಲ್ಲಿ ಆಯ್ಕೆಯಾದ ಮೋಹನ್, 1984ರಲ್ಲಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಪದವಿ ನಂತರ ಎಲ್‌ಎಲ್‌ಬಿ ಹಾಗೂ ಎಂಬಿಎ ಪದವಿ ಪಡೆದಿರುವ ಅವರು, ಪಿಎಚ್.ಡಿ ಪದವಿಯನ್ನೂ ಪಡೆದಿದ್ದಾರೆ. 1993ರಿಂದ 1995ರ ವರೆಗೆ ಆರ್‌ಎಸ್‌ಎಸ್‌ನ ಉಜ್ಜೈನಿ ಘಟಕದ ಪದಾಧಿಕಾರಿಯಾಗಿದ್ದರು.

ವಿಧಾನಸಭೆ ಪ್ರವೇಶ: ಉಜ್ಜೈನಿ ದಕ್ಷಿಣ ಕ್ಷೇತ್ರದಿಂದ 2013ರಲ್ಲಿ ಗೆದ್ದು, ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಮೋಹನ್, 2018 ಹಾಗೂ 2023ರಲ್ಲಿಯೂ ಗೆಲ್ಲುವ ಮೂಲಕ ಕ್ಷೇತ್ರದ ಮೇಲಿನ ತಮ್ಮ ಹಿಡಿತವನ್ನು ಸಾಬೀತುಪಡಿಸಿದ್ದಾರೆ.

ಈ ನಡುವೆ, 2011ರಿಂದ 2013ರ ವರೆಗಿನ ಅವಧಿಯಲ್ಲಿ ಮಧ್ಯಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.