ಅಹಮದಾಬಾದ್: ಮೊರ್ಬಿ ತೂಗು ಸೇತುವೆ ಕುಸಿದ ಪ್ರಕರಣದ ಪ್ರಮುಖ ಆರೋಪಿ ಕೈಗಾರಿಕೋದ್ಯಮಿ ಜಯಸುಖ್ ಪಟೇಲ್ ಅವರು ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ತುಲಾಭಾರ ಮಾಡಿಸಿಕೊಂಡಿದ್ದು ಹೊಸ ವಿವಾದಕ್ಕೆ ಕಾರಣವಾಗಿದೆ.

ಹೂವಿನಿಂದ ಅಲಂಕೃತವಾಗಿರುವ ತಕ್ಕಡಿಯ ಒಂದು ಭಾಗದಲ್ಲಿ ಪಟೇಲ್ ಮತ್ತೊಂದು ಭಾಗದಲ್ಲಿ ಮೋದಕಗಳು ಇರುವ ಫೋಟೊ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಕಾರ್ಯಕ್ರಮದ ಆಯೋಜಕರು, 75 ಕೆ.ಜಿ ತೂಕದ ಮೋದಕವನ್ನು ಪಾಟೀದಾರ್ ಕುಟುಂಬಗಳಿಗೆ ಪ್ರಸಾದವಾಗಿ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

ಮಾಹಿತಿ ಪ್ರಕಾರ, ಪಟೇಲ್ ಅವರು ಗಡಿಯಾರ ತಯಾರಿಕಾ ಕಂಪನಿ ಒರೆವಾ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಕಡವಾ ಪಾಟೀದಾರ್ ಕನ್ಯಾ ಕೇಲವಾಣಿ ಮಂಡಲ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಟೇಲ್ ಪಾಲ್ಗೊಂಡಿದ್ದರು. ಉಮಾ ರಂಗಭವನ, ಉಮಾ ಆದರ್ಶ ವಿವಾಹ ಸಂಕೀರ್ಣ ಉದ್ಘಾಟನೆ ಮತ್ತು ಉಮಾ ಮಾತಾಜಿ ಮಂದಿರದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಪಟೇಲ್ ಅವರನ್ನು ಆಹ್ವಾನಿಸಲಾಗಿತ್ತು. ನವೆಂಬರ್ 13ರಿಂದ 15 ನಡುವೆ ಕಾರ್ಯಕ್ರಮ ನಡೆದಿದೆ.

ಟ್ರಸ್ಟ್ನ ಮುಖ್ಯಸ್ಥ ಎ.ಕೆ.ಪಟೇಲ್ ಅವರು, ‘ಜಯಸುಖ್ ಅವರ ತಂದೆ ಒಆರ್ ಪಟೇಲ್ ಅವರು ಈ ಭೂಮಿಯನ್ನು ₹80,000ಕ್ಕೆ ನೀಡಿದ್ದರು. ಇದೀಗ ಮೂರರಿಂದ ನಾಲ್ಕು ಕೋಟಿ ಬೆಲೆಬಾಳುತ್ತದೆ. ಇಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದಾಗ ಅವರ ಕುಟುಂಬಕ್ಕೆ ಆಹ್ವಾನ ನೀಡಬಾರದೇ? ದುರಂತ ನಡೆದಿದ್ದಕ್ಕೆ ಬೇಸರವಿದೆ. ಹಾಗಂತ ಅವರ ಕುಟುಂಬವನ್ನು ಸ್ಮರಿಸುವುದು ತಪ್ಪೇ. ಅವರು ಸೌರಾಷ್ಟ್ರದ ಉದ್ದಕ್ಕೂ ಶಾಲೆಗಳನ್ನು ಸ್ಥಾಪಿಸಿದ್ದಾರೆ, ಅಲ್ಲಿ ಎಲ್ಲ ಸಮುದಾಯದ ಮಕ್ಕಳೂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಜಯಸುಖ್ ಅವರು ನ್ಯಾಯಾಲಯದಿಂದ ಒಪ್ಪಿಗೆ ಪಡೆದೇ ಇಲ್ಲಿಗೆ ಬಂದಿದ್ದರು’ ಎಂದು ಸಮರ್ಥಿಸಿಕೊಂಡಿದ್ದಾರೆ.

ಜಯಸುಖ್ ಪಟೇಲ್ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ. ಮೊರ್ಬಿ ಜಿಲ್ಲೆ ಪ್ರವೇಶಿಸಲು ಅವರಿಗೆ ನಿರ್ಬಂಧ ಹೇರಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಅವರು ಮೊರ್ಬಿ ಪ್ರವೇಶಿಸಲು ಸ್ಥಳೀಯ ನ್ಯಾಯಾಲಯದಿಂದ ಅನುಮತಿ ಪಡೆದಿದ್ದರು. ಈ ಸಂದರ್ಭದಲ್ಲಿ ಅವರು ಸಂಘದ ಟ್ರಸ್ಟಿ ಎಂದು ಪ್ರತಿಪಾದಿಸಿದ್ದರು. ಇದಕ್ಕೆ ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು.

2022 ಅಕ್ಟೋಬರ್ 30ರಂದು ಮೊರ್ಬಿ ನಗರದಲ್ಲಿ ತೂಗು ಸೇತುವೆ ಕುಸಿದ ಪರಿಣಾಮ 135 ಮಂದಿ ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.