ಇಂದೋರ್: ಹಾಸಿಗೆಯಲ್ಲಿ ಮೂತ್ರ ಮಾಡಿದ್ದಕ್ಕೆ 9 ವರ್ಷದ ದತ್ತು ಮಗಳ ಗುಪ್ತಾಂಗವನ್ನು ಮಹಿಳೆಯೊಬ್ಬರು ಸುಟ್ಟಿರುವ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ವರದಿಯಾಗಿದೆ

ಈ ಘಟನೆ ಕುರಿತಂತೆ 40 ವರ್ಷದ ಮಹಿಳೆಯ ವಿರುದ್ಧ ದೂರು ದಾಖಲಾಗಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಯ ಎಸ್ಐ ಅಜಯ್ ವರ್ಮಾ ತಿಳಿಸಿದ್ದಾರೆ.

ಮಹಿಳೆಯು ಸಂತ್ರಸ್ತ ಬಾಲಕಿಯ ಹತ್ತಿರದ ಸಂಬಂಧಿಯಾಗಿದ್ದಾರೆ. ಅವರು ಕೆಲವು ವರ್ಷಗಳ ಹಿಂದೆ ಬಾಲಕಿಯನ್ನು ದತ್ತು ಪಡೆದಿದ್ದರು. ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಶಿಕ್ಷೆಯಾಗಿ ಬಾಲಕಿಯ ಖಾಸಗಿ ಭಾಗವನ್ನು ಸುಟ್ಟಿದ್ದಾರೆ ಎಂದು ಅಜಯ್ ವರ್ಮಾ ಹೇಳಿದ್ದಾರೆ. ಇಲ್ಲಿಯವರೆಗೂ ಆರೋಪಿ ಮಹಿಳೆಯನ್ನು ಬಂಧಿಸಿಲ್ಲ.

ಘಟನೆ ಬಗ್ಗೆ ಮಧ್ಯಪ್ರದೇಶ ಮಹಿಳಾ ಆಯೋಗದ ಅಧ್ಯಕ್ಷೆ ಪಲ್ಲವಿ ಪೊರ್ವಾಲ್ ಪ್ರತಿಕ್ರಿಯಿಸಿದ್ದು ಆರೋಪಿ ಮಹಿಳೆಯ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಸಂತ್ರಸ್ತ ಬಾಲಕಿಯ ಗುಪ್ತಾಂಗ ಭಾಗಶಃ ಸುಟ್ಟಿದೆ. ತಲೆಕೂದಲು ಹಾಗೂ ಉಗುರುಗಳನ್ನು ಕೀಳಲಾಗಿದ್ದು ಬಾಲಕಿಯ ದೇಹದಲ್ಲಿ ಗಾಯಗಳಾಗಿವೆ ಎಂದು ಪಲ್ಲವಿ ಹೇಳಿದ್ದಾರೆ.

ಘಟನೆ ಬಗ್ಗೆ ಎಫ್ಐಆರ್ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಐ ಅಜಯ್ ವರ್ಮಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.