ಕರೌಲಿ: ಐಪಿಎಲ್ ಮತ್ತು ಲೋಕಸಭಾ ಚುನಾವಣೆಯನ್ನು ಏಕಕಾಲಕ್ಕೆ ನಡೆಸಬಲ್ಲ ತಾಕತ್ತು ನನಗಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ರಾಜಸ್ಥಾನದ ಕರೌಲಿಯಲ್ಲಿ ಶುಕ್ರವಾರ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಸರಿಯಾದ ಭದ್ರತೆ ಒದಗಿಸಲು ಸಾಧ್ಯವಾಗದ ಕಾರಣ ಕಾಂಗ್ರೆಸ್ ಎರಡು ಬಾರಿ ಐಪಿಎಲ್ ಪಂದ್ಯವನ್ನು ಭಾರತದಿಂದ ಹೊರಗೆ ನಡೆಸಿತ್ತು ಎಂದಿದ್ದಾರೆ.

ಯುವಜನರು ಐಪಿಎಲ್ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದಾರೆ. ಎರಡು ಬಾರಿ ಈ ಪಂದ್ಯ ಭಾರತದ ಹೊರಗೆ ನಡೆದಿತ್ತು.ದಕ್ಷಿಣ ಆಫ್ರಿಕಾ ಐಪಿಎಲ್ಗೆ ವೇದಿಕೆ ಒದಗಿಸಿತ್ತು. ಆ ರೀತಿ ಆಗಿದ್ದು 2009 ಮತ್ತು 2014ರಲ್ಲಿ.ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎಉಗ್ರರಿಗೆ ಹೆದರುತ್ತಿತ್ತು.ಆ ಸರ್ಕಾರಕ್ಕೆ ಧೈರ್ಯವೇ ಇಲ್ಲ.

2009 ಮತ್ತು 2014ರಲ್ಲಿ ಲೋಕಸಭಾ ಚುನಾನಣೆ ನಡೆದಿತ್ತು. ಪೊಲೀಸರು ಬ್ಯುಸಿ ಆಗಿದ್ದರಿಂದ ನಮಗೆ ಐಪಿಎಲ್ ಇರಲಿಲ್ಲ.ಈಗ ಐಪಿಎಲ್ ನಡೆಯುತ್ತಿದೆ. ನವರಾತ್ರಿ, ರಾಮನವಮಿ, ಹನುಮಾನ್ ಜಯಂತಿ ಎಲ್ಲವೂ ಇದೆ. ರಂಜಾನ್ ಹತ್ತಿರ ಬರುತ್ತಿದೆ, ಆದರೂ ದೇಶದಲ್ಲಿ ಐಪಿಎಲ್ ನಡೆಯುತ್ತಿದೆ.

ಆ ಸರ್ಕಾರ ಹೆದರಿ ಓಡುತ್ತಿತ್ತು, ಆದರೆ ಮೋದಿಯವರ ಸೇನೆ ಮಾತ್ರ ಗಟ್ಟಿಯಾಗಿ ನಿಂತಿದೆ.

ಸಾಕಷ್ಟು ಭದ್ರತಾ ಪಡೆಗಳು ಇಲ್ಲದಿರುವುದರಿಂದ ಐಪಿಎಲ್ ಮತ್ತು ಚುನಾವಣೆಯನ್ನು ಏಕಕಾಲಕ್ಕೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿದ್ದರಿಂದ 2009ರಲ್ಲಿ ಐಪಿಎಲ್ನ್ನು ದೇಶದ ಹೊರಗೆಆಯೋಜಿಸಲಾಗಿತ್ತು.2014ರಲ್ಲಿಯೂ ಚುನಾವಣೆ ಮತ್ತು ಐಪಿಎಲ್ ಒಟ್ಟೊಟ್ಟಿಗೆ ಇದ್ದಿದ್ದರಿಂದ ಐಪಿಎಲ್ನ್ನು ಹೊರದೇಶದಲ್ಲಿ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.