ನವದೆಹಲಿ: 2002ರಲ್ಲಿ ಗುಜರಾತ್‌ನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಗಲಭೆಕೋರರಿಗೆ ಕಲಿಸಿದ ತಕ್ಕ ಪಾಠದಿಂದಾಗಿ ಅಂದಿನಿಂದ ಇಂದಿನವರೆಗೆ ರಾಜ್ಯದಲ್ಲಿ ಗಲಭೆ ಎಬ್ಬಿಸಲು ಯಾರೂ ಧೈರ್ಯ ಮಾಡಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಅಹಮದಾಬಾದ್‌ನ ಸನಂದ್‌ನಲ್ಲಿ ನಡೆದ 'ವಿಕಸಿತ ಭಾರತ ಸಂಕಲ್ಪ ಯಾತ್ರೆ'ಯಲ್ಲಿ ಗೋಧ್ರಾ ಗಲಭೆ ವಿಚಾರವನ್ನು ಅಮಿತ್ ಶಾ ಪ್ರಸ್ತಾಪಿಸಿದರು.
.ಸಂಸತ್ ಭದ್ರತಾ ಲೋಪಕ್ಕೆ ನಿರುದ್ಯೋಗ, ಹಣದುಬ್ಬರವೇ ಕಾರಣ: ರಾಹುಲ್ ಗಾಂಧಿ.ಭದ್ರತಾ ಲೋಪ: ಅಮಿತ್ ಶಾ ಹೇಳಿಕೆಗೆ ವಿಪಕ್ಷ ಪಟ್ಟು.
2002ರಲ್ಲಿ ಗಲಭೆ ಎದ್ದಿತ್ತು. ನಂತರ ಗಲಭೆಕೋರರಿಗೆ ಮೋದಿ ತಕ್ಕ ಪಾಠ ಕಲಿಸಿದರು. ಅದಾದ ನಂತರ ರಾಜ್ಯದಲ್ಲಿ ಗಲಭೆ ನಡೆದಿದೆಯೇ? ಗುಜರಾತ್‌ನಲ್ಲಿ ಈವರೆಗೆ ಯಾರೂ ಗಲಭೆ ಮಾಡಲು ಧೈರ್ಯ ಮಾಡಿಲ್ಲ ಎಂದು ಅವರು ಹೇಳಿದರು.

ಗುಜರಾತ್‌ನಲ್ಲಿ ಈಗ ಶಾಂತಿ ನೆಲೆಸಿದ್ದು, ರಾಜ್ಯ ಅಭಿವೃದ್ಧಿ ಸಾಧಿಸಿದ್ದು, ಸಮೃದ್ಧವಾಗಿದೆ ಎಂದು ಅವರು ಉಲ್ಲೇಖ ಮಾಡಿದರು.

ಈ ಹಿಂದೆ ಬಾಂಬ್ ಸ್ಪೋಟಗಳು ಸಾಮಾನ್ಯವಾಗಿತ್ತು. ಈ ಕುರಿತು ಪತ್ರಕರ್ತರು ವರದಿ ಮಾಡುವುದನ್ನೇ ಮರೆತಿದ್ದರು. ಸರ್ಜಿಕಲ್ ದಾಳಿ ನಡೆಸಿದ ಪ್ರಧಾನಿ ಮೋದಿ, ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದರು. ಅವರು ದೇಶವನ್ನು ಸುರಕ್ಷಿತವಾಗಿರಿಸಿದರು ಎಂದು ಅಮಿತ್ ಶಾ ಹೇಳಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಹಾಗೂ ಚಂದ್ರಯಾನ-3 ಯೋಜನೆ ಯಶಸ್ವಿಗೂ ಮೋದಿ ಅವರನ್ನು ಅಮಿತ್ ಶಾ ಶ್ಲಾಘಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.