ಚೆನ್ನೈ: ಒಡಿಶಾ ತಂಡ, ಪುರುಷರ ಸೀನಿಯರ್ ರಾಷ್ಟ್ರೀಯ ಹಾಕಿ ಚಾಂಪಿಯನ್ಷಿಪ್ನ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಬುಧವಾರ ಕರ್ನಾಟಕ ತಂಡವನ್ನು ಶೂಟೌಟ್ನಲ್ಲಿ 3–1 ರಿಂದ ಸೋಲಿಸಿತು. ನಿಗದಿ ಆಟ ಮುಗಿದಾಗ ಸ್ಕೋರ್ 3–3 ಸಮನಾಗಿತ್ತು.

ಪೃಥ್ವಿರಾಜ್ ಜಿ.ಎನ್. (5ನೇ ನಿಮಿಷ), ಭರತ್ ಮಹಾಲಿಂಗಪ್ಪ ಕುರ್ತಕೋಟಿ (11ನೇ ನಿಮಿಷ) ಮತ್ತು ವಿಶ್ವಾಸ್ ಜಿ (26ನೇ ನಿಮಿಷ) ಅವರು ಕರ್ನಾಟಕ ತಂಡದ ಪರ ಗೋಲು ಗಳಿಸಿದರು. ಒಡಿಶಾ ಪರ ಮಂಗಲ್ ಲೋಹಾರ್ (14ನೇ ನಿಮಿಷ), ಶಿಲಾನಂದ ಲಾಕ್ರಾ (20ನೇ ನಿಮಿಷ) ಮತ್ತು ಪ್ರತಾಪ್ ಲಾಕ್ರಾ (50ನೇ ನಿಮಿಷ) ಗೋಲು ಗಳಿಸಿದರು.

ಶೂಟೌಟ್ನಲ್ಲಿ ಒಡಿಶಾ ಗೋಲ್ಕೀಪರ್ ಸಾಹಿಲ್ ಕುಮಾರ್ ನಾಯಕ್, ಒಂದು ಗೋಲನ್ನು ಮಾತ್ರ ಬಿಟ್ಟುಕೊಟ್ಟರು. ಒಡಿಶಾದ ಮೂವರು ತಮ್ಮ ಯತ್ನಗಳಲ್ಲಿ ಯಶ ಕಂಡರು. ಒಡಿಶಾ 3–1ರಲ್ಲಿ ಶೂಟೌಟ್ನಲ್ಲಿ ಜಯಶಾಲಿಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.