ಚಂಡೀಗಡ: ಇಲ್ಲಿನ ಪಟಿಯಾಲಾ ಕೇಂದ್ರ ಕಾರಾಗೃಹದಲ್ಲಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು, ಜೈಲಿನಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸಲ್ಲಿದ್ದು, ಅವರಿಗೆ ನಿತ್ಯ ಎಳನೀರು, ಲ್ಯಾಕ್ಟೋಸ್ ಮುಕ್ತ ಹಾಲು, ಜ್ಯೂಸ್, ಬಾದಾಮಿ ಮತ್ತು ಹರ್ಬಲ್ ಟೀ ನೀಡಬೇಕೆಂದು ವೈದ್ಯರು ಶಿಫಾರಸು ಮಾಡಿದ್ದಾರೆ ಎಂದ ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೇ 23ರಂದು ಪಟಿಯಾಲಾದ ರಾಜೀಂದ್ರ ಆಸ್ಪತ್ರೆಯಲ್ಲಿ ಸಿಧು ಅವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿತ್ತು. ಸಿಧುಗೆ ಯಕೃತ್ತಿಗೆ ಸಂಬಂಧಿಸಿದ ಕಾಯಿಲೆ ಇದ್ದು, ಜೈಲಿನಲ್ಲಿ ಅವರಿಗೆ ವಿಶೇಷ ಡಯಟ್ ಪಟ್ಟಿಯಂತೆ ಆಹಾರ ನೀಡಬೇಕೆಂದು ವೈದ್ಯರ ಮಂಡಳಿಯು ಶಿಫಾರಸು ಮಾಡಿದೆ.

ಆಹಾರ ಪಟ್ಟಿ ಹೀಗಿದೆ: ಮುಂಜಾನೆ ಒಂದು ಕಪ್ ರೋಸ್ಮರಿ ಚಹಾ ಅಥವಾ ಎಳನೀರು, ಒಂದು ಕಪ್ ಲ್ಯಾಕ್ಟೋಸ್ ಮುಕ್ತ ಹಾಲು, ಒಂದು ಚಮಚ ಅಗಸೆ, ಸೂರ್ಯಕಾಂತಿ, ಕಲ್ಲಂಗಡಿ ಬೀಜ. ತಿಂಡಿಗೆ ಐದಾರು ಬಾದಾಮಿ, ಒಂದು ವಾಲ್‌ನಟ್ ಮತ್ತು ಎರಡು ಪೆಕನ್ ಬೀಜಗಳು (ವಾಲ್‌ನಟ್ ಜಾತಿಗೆ ಸೇರಿದ ಬೀಜ).

ಮಧ್ಯಾಹ್ನದ ಊಟಕ್ಕೂ ಮುನ್ನದ ಉಪಾಹಾರದಲ್ಲಿ ಬೀಟ್‌ರೂಟ್, ಸೌತೆಕಾಯಿ, ತುಳಸಿ, ನೆಲ್ಲಿಕಾಯಿ ಮತ್ತು ಕ್ಯಾರೆಟ್ ಮಿಶ್ರಣದ ಒಂದು ಲೋಟ ಜ್ಯೂಸ್ ಅಥವಾ ಕಲ್ಲಂಗಡಿ, ಪೇರಲ ಯಾವುದಾದರೂ ಒಂದು ಹಣ್ಣು. ಮೊಳಕೆ ಬರಿಸಿದ ಕಾಳುಗಳು ಜತೆಗೆ ಸೌತೆಕಾಯಿ, ಟೊಮೆಟೊ, ಅರ್ಧ ನಿಂಬೆ, ಬೆಣ್ಣೆಹಣ್ಣು.

ಮಧ್ಯಾಹ್ನದ ಊಟಕ್ಕೆ ಒಂದು ಬಟ್ಟಲು ಸೌತೆಕಾಯಿ, ಒಂದು ಚಪಾತಿ, ದಾಲ್, ಹಸಿರು ತರಕಾರಿಗಳು, ಸಂಜೆ, ಅವರಿಗೆ ಕಡಿಮೆ ಕೊಬ್ಬಿನ ಹಾಲಿನೊಂದಿಗೆ ಒಂದು ಕಪ್ ಚಹಾ ಮತ್ತು ಒಂದು ಸ್ಲೈಸ್ ಪನ್ನೀರ್, ರಾತ್ರಿಯ ಊಟಕ್ಕೆ ತರಕಾರಿಗಳು ಮತ್ತು ಬೇಳೆಯ ಸೂಪ್ ಅಥವಾ ಒಂದು ಬಟ್ಟಲು ಹಸಿರು ತರಕಾರಿಗಳು, ಮಲಗುವ ವೇಳೆಗೆ ಹರ್ಬಲ್ ಟೀ ನೀಡಲು ವೈಧ್ಯರು ಶಿಫಾರಸು ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.