ಭೋಪಾಲ್: ಮಾಜಿ ಪ್ರಧಾನಿಪಂಡಿತ್ ಜವಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ದೇಶದ ಸೇನಾ ಪಡೆಯನ್ನುಕಟ್ಟುವಾಗ ಪ್ರಧಾನಿ ನರೇಂದ್ರ ಮೋದಿಯವರಿಗೆ ಸರಿಯಾಗಿ ಚಡ್ಡಿ ಹಾಕಲು ಬರುತ್ತಿರಲಿಲ್ಲ ಎಂದುಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ವ್ಯಂಗ್ಯವಾಡಿದ್ದಾರೆ.

ಖಂಡ್ವಜಲ್ಲೆಯ ಹೊರಸೂದು ಗ್ರಾಮದಲ್ಲಿ ನಡೆದ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕೇಂದ್ರದಲ್ಲಿ ಬಿಜೆಪಿ ಆಡಳಿತದಲ್ಲಿ ಇದ್ದಾಗಲೇಅತಿಹೆಚ್ಚು ಭಯೋತ್ಪಾದಕದಾಳಿಗಳು ನಡೆದಿದೆ. ಮೋದಿಯವರು ಪೈಜಾಮ ಮತ್ತು ಚಡ್ಡಿ ಹಾಕಲು ಕಲಿಯುವ ಮೊದಲೇ ಮಾಜಿ ಪ್ರಧಾನಿ ನೆಹರು ಮತ್ತು ಇಂದಿರಾಗಾಂಧಿ ದೇಶದ ನೌಕಾ ಪಡೆ, ವಾಯು ಪಡೆಯನ್ನು ಕಟ್ಟಿದ್ದಾರೆ, ಮೋದಿ ದೇಶದ ಭದ್ರತೆಯ ಬಗ್ಗೆ ಮಾಡುತ್ತಾರೆ,2014ಕ್ಕೂ ಮೊದಲು ದೇಶವು ಸುರಕ್ಷಿತವಾಗಿರಲಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

ಪಲ್ವಾಮಾ ಭಯೋತ್ಪಾದಕದಾಳಿ ಮತ್ತು ಬಾಲಕೋಟ್ನ ಮೇಲಿನ ವಾಯು ದಾಳಿಯನ್ನು ಪ್ರಧಾನಿ ಮೋದಿ ಚುನಾವಣೆಗೆಬಳಸುತ್ತಿದ್ದಾರೆ ಎಂದು ಆರೋಪಿಸಿದರು.

ಯಾವ ಸರಕಾರ ಕೇಂದ್ರದಲ್ಲಿದ್ದಾಗ ಹೆಚ್ಚುಭಯೋತ್ಪಾದಕದಾಳಿಯಾಗಿದೆ? 2001ರ ಪಾರ್ಲಿಮೆಂಟ್ ದಾಳಿ ನಡೆದಾಗ ಕೇಂದ್ರದಲ್ಲಿ ಯಾರ ಸರಕಾರ ಇತ್ತು ? ಬಿ.ಜೆ.ಪಿ ಸರಕಾರ ಕೇಂದ್ರದಲ್ಲಿದ್ದಾಗ ಹೆಚ್ಚುಭಯೋತ್ಪಾದಕ ದಾಳಿಗಳಾಗಿವೆ ಎಂದು ಅಂಕಿ ಅಂಶಗಳು ತಿಳಿಸುತ್ತದೆ.

ಮೋದಿ 2 ಕೋಟಿ ಉದ್ಯೋಗದ ಭರವಸೆಯು ನೀಡಿದ್ದಾರೆ. ಯುವಕರಿಗೆ ಉದ್ಯೋಗ ಸಿಕ್ಕಿದೆಯೇ ಎಂದು ಪ್ರಶ್ನಿಸಿದರು. ಅಚ್ಚೆ (ಒಳ್ಳೆಯ)ದಿನ್ ಬಂದಿದೆಯೇ? ಕಪ್ಪು ಹಣ ಎಲ್ಲಿದೆ ಎಂದು ಕಮಲ್ ನಾಥ್ ಅವರು ಮೋದಿ ಸರಕಾರವನ್ನುಪ್ರಶ್ನಿಸಿದ್ದಾರೆ.

ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಮೋದಿಮುಖ್ಯಮಂತ್ರಿ ಕಮಲ್ ನಾಥ್ ರನ್ನ ಭ್ರಷ್ಟನಾಥ್ ಎಂದು ಕರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.