ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವವನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶದಿಂದ ಸರ್ಕಾರವು ಶೀಘ್ರದಲ್ಲೇ ಹೊಸ ನೀತಿ ಜಾರಿಗೊಳಿಸಲಿದೆ ಎಂದು ಪ್ರಧಾನ ವೈಜ್ಞಾನಿಕ ಸಲಹೆಗಾರ ಅಜಯ್ ಕುಮಾರ್ ಸೂದ್ ಹೇಳಿದ್ದಾರೆ.

ಹೊಸ ನೀತಿಯಿಂದಾಗಿ ‘ಸ್ಪೇಸ್ ಎಕ್ಸ್’ ರೀತಿಯಲ್ಲಿ ಭಾರತ ಕೂಡ ತನ್ನದೇ ಆದ ಉದ್ಯಮ ಆರಂಭಿಸಲಿದೆ ಎಂದು ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಹೊಸ ನೀತಿ ಅಂತಿಮಗೊಳಿಸುವ ನಿಟ್ಟಿನಲ್ಲಿ ಸಮಾಲೋಚನೆ ನಡೆದಿದೆ ಎಂದಿರುವ ಅವರು, ‘ಭೂಮಿಗೆ ಸಮೀಪದ ಕಕ್ಷೆಯಲ್ಲಿ (ಎಲ್‌ಇಒ) ಕಾರ್ಯನಿರ್ವಹಿಸಬಲ್ಲಂತಹ ಉಪಗ್ರಹಗಳನ್ನು ಹೊಸ ತಂತ್ರಜ್ಞಾನ ಬಳಸಿ ನಿರ್ಮಿಸಲಾಗುತ್ತಿದೆ. ಇವು ಕಡಿಮೆ ವೆಚ್ಚದ್ದಾಗಿವೆ. ಎಲ್‌ಇಒದಲ್ಲಿ ಈಗಾಗಲೇ ಭಾರಿ ಸಂಖ್ಯೆಯಲ್ಲಿ ಉಪಗ್ರಹಗಳಿದ್ದು, ಇವುಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಬದಲಾವಣೆಗೆ ಕಾರಣವಾಗಲಿವೆ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ವಲಯದಲ್ಲಿ ಉಪಗ್ರಹಗಳ ನಿರ್ಮಾಣಕ್ಕೆ ಸರ್ಕಾರವು ಹೆಚ್ಚಿನ ಪ್ರೋತ್ಸಾಹ ನೀಡಲಿದೆ. ಮುಂದಿನ ಎರಡು ವರ್ಷಗಳಲ್ಲಿ ನಮ್ಮದೇ ಆದ ‘ಸ್ಪೇಸ್ ಎಕ್ಸ್’ ಅನ್ನು ಹೊಂದಲಿದ್ದೇವೆ ಎಂದು ಅಜಯ್ ಕುಮಾರ್ ತಿಳಿಸಿದ್ದಾರೆ.

ಏಪ್ರಿಲ್ 25ರಂದು ಅಜಯ್ ಕುಮಾರ್ ಅವರು ಪ್ರಧಾನ ವೈಜ್ಞಾನಿಕ ಸಲಹೆಗಾರರಾಗಿ ಅಧಿಕಾರ ವಹಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.