ಎಮ್ಮಿಗನೂರು: ‘ಮುಂದಿನ ವಿಧಾನಸಭಾ ಚುನಾವಣೆಯು ಬಡವರು ಹಾಗೂ ಪ್ರಭಾವಿ ಬಂಡವಾಳಶಾಹಿಗಳ ನಡುವಿನದು‘ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಹೇಳಿದ್ದಾರೆ.

ಕರ್ನೂಲ್ ಜಿಲ್ಲೆಯ ಎಮ್ಮಿಗನೂರಿನಲ್ಲಿ ಗುರುವಾರ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ‘ಇದು ವರ್ಗ ಸಂಘರ್ಷ‘ ಎಂದಿದ್ದಾರೆ.

‘ಬರಲಿರುವ ಚುನಾವಣೆಯು ಜಾತಿಗಳ ನಡುವಿನ ಯುದ್ಧವಲ್ಲ. ಈ ಸಂಘರ್ಷದಲ್ಲಿ ಬಡವರು ಒಂದೆಡೆ ಇದ್ದರೆ, ಪ್ರಭಾವಿಗಳಾದ ಬಂಡವಾಳಶಾಹಿ ವರ್ಗ ಮತ್ತೊಂದೆಡೆ ಇದೆ. ಇದರಲ್ಲಿ ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಅಥವಾ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರಿಗೆ ಇರುವ ಮಾಧ್ಯಮಗಳ ಬೆಂಬಲ ನನಗಿಲ್ಲ. ಆದರೂ ದೇವರ ಆಶೀರ್ವಾದವಿದೆ ಮತ್ತು ಜನರ ಬೆಂಬಲವಿದೆ’ ಎಂದಿದ್ದಾರೆ.
.Telangana Election 2023 | ಚುನಾವಣೆಯಲ್ಲಿ ಕೆಸಿಆರ್ಗೆ ಸೋಲು: ರಾಹುಲ್ ಗಾಂಧಿ.
‘ಬರಲಿರುವ ಚುನಾವಣೆಯಲ್ಲಿ ಮತ ಹಾಕುವ ಮುನ್ನ ಪ್ರತಿಯೊಬ್ಬರೂ ಅದರಿಂದ ತಮ್ಮ ಕುಟುಂಬಕ್ಕೆ ಲಾಭವಾಗುವುದೇ ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ. ಒಂದೊಮ್ಮೆ ಕುಟುಂಬಕ್ಕೆ ನೆರವಾಗುವುದಾದರೆ ಸೈನಿಕರಂತೆ ನನ್ನ ಜೊತೆ ನಿಲ್ಲಿ’ ಎಂದು ಜಗನ್ ಮನವಿ ಮಾಡಿದ್ದಾರೆ.

ದರ್ಜಿಗಳು, ಕ್ಷೌರಿಕರು ಹಾಗೂ ಇನ್ನಿತರ ಶ್ರಮಿಕ ವರ್ಗದರಿಗೆ ತಲಾ ₹10 ಸಾವಿರ ಆರ್ಥಿಕ ನೆರವು ನೀಡುವ ಉದ್ದೇಶದ ₹325 ಕೋಟಿ ಮೊತ್ತದ ‘ಜಗನನ್ನ ಜೆದೋಡು’ ಯೋಜನೆಗೆ ಅವರು ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.