ನವದೆಹಲಿ: ಜೈಲಿನಲ್ಲಿರುವ ಕಾಶ್ಮೀರಿ ನಾಯಕ ಎಂಜಿನಿಯರ್ ರಶೀದ್ ಎಂದೇ ಖ್ಯಾತರಾಗಿರುವ ಶೇಖ್ ಅಬ್ದುಲ್ ರಶೀದ್ ಜುಲೈ 25ರಂದು ಸಂಸದರಾಗಿ ಪ್ರಮಾಣವಚನ ಸ್ವೀಕರಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಸಮ್ಮತಿ ಸೂಚಿಸಿದೆ.

ಈ ಕುರಿತ ಆದೇಶವನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಚಂದೇರ್ ಜಿತ್ ಸಿಂಗ್ ನಾಳೆ ಪ್ರಕಟಿಸಲಿದ್ದಾರೆ.

ಪಕ್ಷೇತರ ಸಂಸದನಾಗಿ ಬಾರಾಮುಲ್ಲಾ ಕ್ಷೇತ್ರದಿಂದ ಆಯ್ಕೆಯಾಗಿರುವ ರಶೀದ್, 2017ರ ಭಯೋತ್ಪಾದನೆ ಆರ್ಥಿಕ ನೆರವು ನೀಡಿದ ಪ್ರಕರಣದಲ್ಲಿ ಜೈಲಿನಲ್ಲಿದ್ದಾರೆ. ತಮ್ಮ ಸಂಸದೀಯ ಕೆಲಸಗಳನ್ನು ನಿರ್ವಹಿಸಲು ಮಧ್ಯಂತರ ಜಾಮೀನು ಅಥವಾ ಪೆರೋಲ್ ನೀಡುವಂತೆ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಜೂನ್ 22 ರಂದು ಪ್ರಕರಣದ ವಿಚಾರಣೆ ಮುಂದೂಡಿದ್ದ ವಿಶೇಷ ನ್ಯಾಯಾಲಯ, ಪ್ರತಿಕ್ರಿಯೆ ಸಲ್ಲಿಸುವಂತೆ ಎನ್‌ಐಎಗೆ ಸೂಚಿಸಿತ್ತು.

ಈ ಸಂಬಂಧ ಪ್ರತಿಕ್ರಿಯಿಸಿರುವ ಎನ್‌ಐಎ ವಕೀಲರು, ರಶೀದ್ ಪ್ರಮಾಣವಚನ ಸ್ವೀಕಾರಕ್ಕೆ ನೀಡಲಾಗಿರುವ ಅನುಮತಿಯು ಮಾಧ್ಯಮಗಳ ಜೊತೆ ಮಾತನಾಡಬಾರದು ಎಂಬ ಷರತ್ತು ಸೇರಿದಂತೆ ಕೆಲವು ಷರತ್ತುಗಳನ್ನು ಒಳಗೊಂಡಿದೆ. ತಿಹಾರ್ ಜೈಲಿನಲ್ಲಿರುವ ರಶೀದ್, ಎಲ್ಲ ಚಟುವಟಿಕೆಗಳನ್ನು ಒಂದೇ ದಿನದಲ್ಲಿ ಪೂರ್ಣಗೊಳಿಸಬೇಕಿದೆ.

ಭಯೋತ್ಪಾದನೆ ಹಣಕಾಸಿನ ನೆರವು ನೀಡಿದ ಆರೋಪದ ಹಿನ್ನೆಲೆ ರಶೀದ್ ಮೇಲೆ ಎನ್‌ಐಎ ಯುಎಪಿಎ ಕಾಯ್ದೆ ಅಡಿ ಪ್ರಕರಣ ದಾಖಲಿಸಿರುವುದರಿಂದ 2019ರಿಂದ ಅವರು ಜೈಲಿನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.