ನವದೆಹಲಿ: ಆರ್ಎಸ್ಎಸ್ ಮುಖಂಡ ಶ್ರೀನಿವಾಸನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆಯ ಕಾರ್ಯಕರ್ತ ಶಿಹಾಬ್ ಅಲಿಯಾಸ್ ಬಾಬು ಎಂಬಾತನನ್ನು ಕೇರಳದ ಮಲಪ್ಪುರದಲ್ಲಿರುವ ಆತನ ಮನೆಯಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಬಂಧಿಸಿದೆ.

2022 ಏಪ್ರಿಲ್ 16ರಂದು ಶ್ರೀನಿವಾಸನ್ ಅವರ ಕೊಲೆ ನಡೆದಿದ್ದು, ಬಳಿಕ ಈತ ತಲೆ ಮರೆಸಿಕೊಂಡಿದ್ದ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

‘ಪಿಎಫ್ಐ ನಡೆಸುತ್ತಿದ್ದ ಉಗ್ರ ಚಟುವಟಿಕೆಗಳಲ್ಲಿ ಮತ್ತು ಶ್ರೀನಿವಾಸನ್ ಕೊಲೆ ಪ್ರಕರಣದ ಸಂಚಿನಲ್ಲಿ ಶಿಹಾಬ್ ಶಾಮೀಲಾಗಿದ್ದಾನೆ’ ಎಂದು ಎನ್ಐಎ ವಕ್ತಾರರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಮಾರ್ಚ್ 17ರಂದು ಎನ್ಐಎ 59 ಮಂದಿಯ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.