ನವದೆಹಲಿ: ಎಚ್ಆರ್ಡಿ ಸಚಿವಾಲಯದ ನ್ಯಾಷನಲ್ ಇನ್ಸ್ಟಿಟ್ಯೂಷನಲ್ರ್ಯಾಂಕಿಂಗ್ ಫ್ರೇಮ್ವರ್ಕ್ (ಎನ್ಐಆರ್ಎಫ್) ಗುರುವಾರ ದೇಶದ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದ್ದು,ಐಐಟಿ ಮದ್ರಾಸ್, ಐಐಎಸ್ಸಿ ಬೆಂಗಳೂರು ಮತ್ತು ಐಐಟಿ ದೆಹಲಿ ಮೊದಲ ಮೂರು ಸ್ಥಾನಗಳನ್ನು ಗಳಿಸಿವೆ.

ವಾರ್ಷಿಕ ಶ್ರೇಯಾಂಕ ಪಟ್ಟಿಯ ಪ್ರಕಾರ, ಐಐಎಸ್ಸಿ ಬೆಂಗಳೂರು, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮೊದಲ ಮೂರು ಅತ್ಯುನ್ನತ ವಿಶ್ವವಿದ್ಯಾಲಯಗಳ ಸಾಲಿನಲ್ಲಿವೆ.

ಐಐಎಂ ಅಹಮದಾಬಾದ್ ದೇಶದ ಅತ್ಯುನ್ನತ ಬಿ–ಸ್ಕೂಲ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ನಂತರ ಸ್ಥಾನಗಳು ಐಐಎಂ ಬೆಂಗಳೂರು ಮತ್ತು ಐಐಎಂ ಕೋಲ್ಕತ್ತಕ್ಕೆ ಸಂದಿವೆ.

ಅಗ್ರ ಶ್ರೇಯಾಂಕದ ಕಾಲೇಜುಗಳ ಪಟ್ಟಿಯಲ್ಲಿ ದೆಹಲಿಯ ಮಿರಾಂಡಾ ಕಾಲೇಜು ಮೊದಲ ಸ್ಥಾನ ಪಡೆದಿದ್ದು, ದೆಹಲಿಯ ಲೇಡಿ ಶ್ರೀರಾಮ್ ಮಹಿಳಾ ಕಾಲೇಜು ಮತ್ತು ಸೇಂಟ್ ಸ್ಟೀಫನ್ಸ್ ಕಾಲೇಜು ನಂತರದ ಸ್ಥಾನ ಪಡೆದಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಹೇಳಿದ್ದಾರೆ.

ಎಂಜಿನಿಯರಿಂಗ್ ವಿಭಾಗದಲ್ಲಿ ಐಐಟಿ ಮದ್ರಾಸ್, ಐಐಟಿ ದೆಹಲಿ ಮತ್ತು ಐಐಟಿ ಮುಂಬೈ ಕ್ರಮವಾಗಿ ಮೊದಲ ಮೂರು ಸ್ಥಾನಗಳಿಸಿವೆ.

ಫಾರ್ಮಸಿ ವಿಭಾಗದಲ್ಲಿ ದೆಹಲಿಯ ಜಾಮಿಯಾ ಹಮ್ದರ್ದ್ ಇನ್ಸ್ಟಿಟ್ಯೂಟ್ ಅಗ್ರ ಸ್ಥಾನ ಗಳಿಸಿದ್ದು, ಚಂಡೀಗಡದ ಪಂಜಾಬ್ ವಿಶ್ವವಿದ್ಯಾಲಯ ಮತ್ತು ಮೊಹಾಲಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯೂಟಿಕಲ್ ಸಂಶೋಧನಾ ಕೇಂದ್ರ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ.

ವೈದ್ಯಕೀಯ ಕಾಲೇಜುಗಳ ವಿಭಾಗದಲ್ಲಿ ದೆಹಲಿಯ ಏಮ್ಸ್ ಮೊದಲ ಸ್ಥಾನ ಪಡೆದಿದ್ದು, ಚಂಡೀಗಡದ ಪಿಜಿಐ ಮತ್ತು ವೆಲ್ಲೂರಿನ ಸಿಎಂಸಿ ನಂತರ ಸ್ಥಾನ ಪಡೆದಿವೆ.

ಪ್ರತಿವರ್ಷ ಶ್ರೇಯಾಂಕ ಪಟ್ಟಿಯನ್ನು ಏಪ್ರಿಲ್ ತಿಂಗಳಿನಲ್ಲಿ ಪ್ರಕಟಿಸಲಾಗುತ್ತಿದ್ದು, ಆದರೆ, ಈ ಬಾರಿ ಕೋವಿಡ್–19 ಕಾರಣ ಪಟ್ಟಿಯನ್ನು ತಡವಾಗಿ ಪ್ರಕಟಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.