ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್ಎಂಸಿ) ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕಾಲೇಜುಗಳು ಮತ್ತು ಸಂಸ್ಥೆಗಳು ತಾವು ನೀಡುವ ಹಾಸ್ಟೆಲ್ಗಳಲ್ಲಿ ಉಳಿಯಲು ಒತ್ತಾಯಿಸುವುದು ಮತ್ತು ಹಾಸ್ಟೆಲ್ ಸೌಲಭ್ಯಕ್ಕೆ ಭಾರಿ ಮೊತ್ತದ ಶುಲ್ಕ ವಿಧಿಸುವುದರ ವಿರುದ್ಧ ಎಚ್ಚರಿಕೆ ನೀಡಿದೆ.

ವೈದ್ಯಕೀಯ ಕಾಲೇಜುಗಳು ಅಥವಾ ಸಂಸ್ಥೆಗಳು ತಾವು ನೀಡುವ ಹಾಸ್ಟೆಲ್ಗಳಲ್ಲಿ ಉಳಿಯಲು ಒತ್ತಾಯಿಸುತ್ತಿರುವ ಮತ್ತು ಹಾಸ್ಟೆಲ್ ಸೌಲಭ್ಯದ ಹೆಸರಿನಲ್ಲಿ ಭಾರಿ ಮೊತ್ತ ವಿಧಿಸುತ್ತಿರುವ ಬಗ್ಗೆ ಸ್ನಾತಕೋತ್ತರ ವಿದ್ಯಾರ್ಥಿಗಳಿಂದ ಹಲವಾರು ದೂರುಗಳು ಬಂದಿವೆ. ಈ ನಿರ್ದೇಶನ ಪಾಲಿಸದ ವೈದ್ಯಕೀಯ ಕಾಲೇಜುಗಳು ದಂಡ, ಸೀಟು ಕಡಿತ ಮತ್ತು ಪ್ರವೇಶ ಸ್ಥಗಿತದಂತಹ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಫೆಬ್ರುವರಿ 8ರಂದು ಹೊರಡಿಸಲಾದ ಸುತ್ತೋಲೆಯಲ್ಲಿ, ಆಯೋಗವು ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ನಿಯಂತ್ರಣ (ಪಿಜಿಎಂಇಆರ್) 2023ರ ನಿಯಮಗಳನ್ನು ಉಲ್ಲೇಖಿಸಿ, ‘ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕಾಲೇಜು ಸೂಕ್ತ ವಸತಿ ಸೌಕರ್ಯಗಳನ್ನು ಒದಗಿಸುವುದು ಕಡ್ಡಾಯ. ಆದರೆ, ಪಿ.ಜಿ ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ಇರುವುದನ್ನು ಕಡ್ಡಾಯಗೊಳಿಸಿಲ್ಲ’ ಎಂದು ಎನ್ಎಂಸಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.