ಮುಂಬೈ: ದೇಶದ ಉದ್ದನೆಯ ಸಾಗರ ಸೇತುವೆ (ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್’–ಎಂಟಿಎಚ್‌ಎಲ್)ಯನ್ನು ಪ್ರಧಾನಿ ನರೇಂದ್ರ ಮೋದಿ ನಾಳೆ ಉದ್ಘಾಟಿಸುವರು.

ಈ ಸೇತುವೆಯನ್ನು ‘ಅಟಲ್ ಬಿಹಾರಿ ವಾಜಪೇಯಿ ಸ್ಮೃತಿ ಸೇವರಿ ನ್ಹಾವಾ ಶೇವಾ ಅಟಲ್ ಸೇತು’ ಎಂದೂ ಕರೆಯಲಾಗುತ್ತದೆ. ಈ ಸೇತುವೆ ಮೇಲೆ ಬೈಕ್, ಸ್ಕೂಟರ್, ಆಟೊಗಳು, ಟ್ರ್ಯಾಕ್ಟರ್‌ಗಳು ಹಾಗೂ ಭಾರಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.

ಕಾರುಗಳು, ಟ್ಯಾಕ್ಸಿಗಳು, ಲಘು ವಾಹನಗಳು, ಮಿನಿ ಬಸ್‌ಗಳು ಮತ್ತು ಎರಡು ಆ್ಯಕ್ಸಲ್ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸೇತುವೆಯ ಮೇಲೆ ಈ ವಾಹನಗಳು ಗಂಟೆಗೆ 100 ಕಿ.ಮೀಟರ್ ವೇಗದಲ್ಲಿ ಚಲಿಸಬೇಕು. ವಾಹನಗಳು ಸೇತುವೆ ಮೇಲೆ ಬರುವಾಗ ಮತ್ತು ಇಳಿಯುವಾಗ 40 ಮೀಟರ್ ವೇಗದಲ್ಲಿ ಮಾತ್ರ ಚಲಿಸಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಸಾಗರ ಸೇತುವೆಯು ಮುಂಬೈನ ಸೇವರಿ ಹಾಗೂ ರಾಯಗಡ ಜಿಲ್ಲೆಯ ನ್ಹಾವಾ ಶೇವಾ ನಗರವನ್ನು ಸಂಪರ್ಕಿಸುತ್ತದೆ. ಪ್ರಸ್ತುತ ಈ ಸ್ಥಳಗಳ ನಡುವಿನ ಸಂಚಾರಕ್ಕೆ ಎರಡೂವರೆ ಗಂಟೆಗೂ ಅಧಿಕ ಸಮಯಬೇಕು. ಈ ಸಾಗರ ಸೇತುವೆ ಸಂಚಾರಕ್ಕೆ ಮುಕ್ತಗೊಂಡಾಗ ಪ್ರಯಾಣಕ್ಕೆ 15–20 ನಿಮಿಷಗಳಷ್ಟು ಸಾಕು.

ಎಂಟಿಎಚ್‌ಎಲ್ ಒಟ್ಟು 21.8 ಕಿ.ಮೀ. ಉದ್ದ ಇದ್ದು, ಸಾಗರದಲ್ಲಿ ಹಾಯ್ದು ಹೋಗುವ ಸೇತುವೆಯ ಉದ್ದ 16.5 ಕಿ.ಮೀ.ನಷ್ಟಿದೆ. ಇಲ್ಲಿನ ಸಂಚಾರಕ್ಕೆ ಮಹಾರಾಷ್ಟ್ರ ಸರ್ಕಾರ ₹250 ಟೋಲ್ ಶುಲ್ಕ ನಿಗದಿ ಮಾಡಿದೆ.

ಚೀನಾದಲ್ಲಿರುವ ಹ್ಯಾಂಗ್‌ಜೌ ಬೇ ಬ್ರಿಡ್ಜ್ (36 ಕಿ.ಮೀ. ಉದ್ದ) ಹಾಗೂ ಸೌದಿ ಅರೇಬಿಯಾದಲ್ಲಿ ಕಿಂಗ್ ಫಹಾದ್ ಕಾಸ್‌ವೇ (26 ಕಿ.ಮೀ. ಉದ್ದ) ವಿಶ್ವದ ಇತರ ಎರಡು ಸಾಗರ ಸೇತುವೆಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.