ಅಯೋಧ್ಯೆ: ರಾಮಮಂದಿರ ಸೋರುತ್ತಿದೆ ಎನ್ನುವ ದೇವಸ್ಥಾನದ ಪ್ರಧಾನ ಅರ್ಚಕನ ಆರೋಪಗಳನ್ನು ರಾಮಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮಂಗಳವಾರ ನಿರಾಕರಿಸಿದ್ದಾರೆ.

‘ದೇವಸ್ಥಾನದಲ್ಲಿ ನೀರು ಸೋರುತ್ತಿಲ್ಲ. ಆದರೆ, ವಿದ್ಯುತ್ ತಂತಿಗಳನ್ನು ಅಳವಡಿಸಲು ಜೋಡಿಸಲಾಗಿರುವ ಪೈಪ್ಗಳಿಂದ ಮಳೆ ನೀರು ಹೊರಬರುತ್ತಿದೆ’ ಎಂದು ಹೇಳಿದ್ದಾರೆ.

‘ನಾನೇ ಖುದ್ದಾಗಿ ಕಟ್ಟಡವನ್ನು ಪರಿಶೀಲಿಸಿದ್ದೇನೆ. ಎರಡನೇ ಮಹಡಿಯ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಅದು ಪೂರ್ಣಗೊಂಡ ನಂತರ ಮಳೆ ನೀರು ದೇವಸ್ಥಾನದ ಒಳಗೆ ಬರುವುದು ನಿಲ್ಲುತ್ತದೆ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ದೇವಾಲಯದ ನಿರ್ಮಾಣದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಸೋಮವಾರ ಆರೋಪಿಸಿದ್ದ ರಾಮ ಜನ್ಮಭೂಮಿ ದೇವಸ್ಥಾನದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್, ದೇವಸ್ಥಾನದ ಒಳಗಿನಿಂದ ಮಳೆ ನೀರು ಹೊರಗೆ ಹರಿದು ಹೋಗಲು ಯಾವುದೇ ವ್ಯವಸ್ಥೆ ಇಲ್ಲ ಎಂದಿದ್ದರು. ದೇವಾಲಯದ ಸಿಬ್ಬಂದಿ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.

ಶನಿವಾರ ರಾತ್ರಿ ಸುರಿದ ಮೊದಲ ಮಳೆಗೇ ದೇವಸ್ಥಾನದ ಚಾವಣಿಯಿಂದ ನೀರು ಸೋರಿದೆ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.