ನವದೆಹಲಿ: ನಿರೀಕ್ಷೆಯಂತೆ ಲೋಕಸಭೆಯಲ್ಲಿ ಬಿಜೆಪಿ ಸರ್ಕಾರ ವಿಶ್ವಾಸ ಮತವನ್ನು ಗೆದಿದ್ದು, ಅವಿಶ್ವಾಸ ನಿರ್ಣಯಕ್ಕೆ ಸೋಲುಂಟಾಗಿದೆ.

199 ಮತಗಳ ಅಂತರದಿಂದ ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ಮತ ಗೆದಿದ್ದಾರೆ.ಸರ್ಕಾರದ ಪರವಾಗಿ 325 ಮತಗಳು ಹಾಗೂ ಸರ್ಕಾರದ ವಿರುದ್ಧವಾಗಿ 126 ಮತಗಳು ಬಿದ್ದವು.

ವಿಶ್ವಾಸಮತ ಗೆಲ್ಲಲು ಬಿಜೆಪಿಗೆ 226 ಮತಗಳು ಬೇಕಿತ್ತು. ಸಂಸತ್ತಿನಲ್ಲಿ ಒಟ್ಟು 451ಸದಸ್ಯರು ಹಾಜರಿದ್ದರು.

ಸತತ 12 ಗಂಟೆಗಳ ಚರ್ಚೆಯ ಬಳಿಕ ಅವಿಶ್ವಾಸ ನಿರ್ಣಯ ಪ್ರಸ್ತಾವವನ್ನು ಸ್ಪೀಕರ್ ಮತಕ್ಕೆ ಹಾಕಿದರು. ಬಟನ್ ಒತ್ತುವ ಮೂಲಕ ಸದಸ್ಯರು ಅವಿಶ್ವಾಸ ನಿರ್ಣಯದ ಪರವಾಗಿ ಮತ್ತು ವಿರೋಧವಾಗಿ ಮತ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.