ಲಖನೌ: ಉತ್ತರ ಭಾರತದಲ್ಲಿ ಅರ್ಹತೆ ಇರುವ ಯುವ ಜನರೇ ಇಲ್ಲದಿರುವುದು ನಿರುದ್ಯೋಗ ಪ್ರಮಾಣ ಹೆಚ್ಚಳಕ್ಕೆ ಕಾರಣ ಎಂದು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಹೇಳಿದ್ದಾರೆ. ಈ ಹೇಳಿಕೆಗೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಉಬರ್ ಮತ್ತು ಓಲಾ ಟ್ಯಾಕ್ಸಿಗಳಿಂದಾಗಿ ಕಾರು ಮಾರಾಟ ಪ್ರಮಾಣ ಕುಸಿದಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗಷ್ಟೇ ಹೇಳಿದ್ದರು. ಈ ಹೇಳಿಕೆಗೂ ಖಂಡನೆ ವ್ಯಕ್ತವಾಗಿತ್ತು.

‘ದೇಶದಲ್ಲಿ ಉದ್ಯೋಗದ ಕೊರತೆ ಇಲ್ಲವೇ ಇಲ್ಲ... ಉದ್ಯೋಗಗಳು ಹೇರಳವಾಗಿವೆ. ಆದರೆ, ಉತ್ತರ ಭಾರತದಲ್ಲಿ ಅರ್ಹತೆ ಇರುವ ಯುವ ಜನರೇ ಇಲ್ಲ’ ಎಂದು ತಮ್ಮ ಲೋಕಸಭಾ ಕ್ಷೇತ್ರ ಬರೇಲಿಯಲ್ಲಿ ಮಾತನಾಡುತ್ತಾ ಗಂಗ್ವಾರ್ ಹೇಳಿದ್ದಾರೆ. ಮೊದಲ ನೂರು ದಿನಗಳಲ್ಲಿ ಕೇಂದ್ರದ ಸಾಧನೆಯನ್ನು ಬಣ್ಣಿಸುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ.

ಕಾರ್ಮಿಕ ಸಚಿವನಾಗಿರುವುದರಿಂದ ದೇಶದಲ್ಲಿ ಉದ್ಯೋಗದ ಕೊರತೆ ಇಲ್ಲ ಎಂಬುದು ತಮಗೆ ತಿಳಿದಿದೆ. ಉತ್ತರ ಭಾರತದಲ್ಲಿ ಅರ್ಹ ಯುವ ಜನರೇ ಸಿಗುತ್ತಿಲ್ಲ ಎಂದು ಹಲವು ಕಂಪನಿಗಳು ತಮಗೆ ತಿಳಿಸಿವೆ ಎಂದು ಅವರು ಹೇಳಿದ್ದಾರೆ.

ಗಂಗ್ವಾರ್ ಹೇಳಿಕೆಯನ್ನು ಕಾಂಗ್ರೆಸ್ ಮತ್ತು ಬಿಎಸ್‌ಪಿ ಖಂಡಿಸಿವೆ. ಅವರು ದೇಶದ ಜನರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿವೆ.‘ಇದು ಜನರಿಗೆ ಮಾಡಿದ ಅವಮಾನ’ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

ಉತ್ತರ ಭಾರತೀಯರನ್ನು ದೂಷಿಸುವುದು ಸರಿಯಲ್ಲ. ನಿಮ್ಮ ಆಳ್ವಿಕೆಯಲ್ಲಿ ಹೊಸ ಉದ್ಯೋಗ ಸೃಷ್ಟಿಯಾಗಿಲ್ಲ, ಸರ್ಕಾರದ ನೀತಿಯಿಂದ ಹಳೆಯ ಉದ್ಯೋಗಗಳು ನಷ್ಟವಾಗಿವೆ.

– ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.