ನವದೆಹಲಿ: ‘ನಾವು ಕ್ರಿಸ್‌ಮಸ್ ಆಚರಿಸುತ್ತಿರುವ ವೇಳೆ, ದೇಶದ ಗಡಿಗಳಲ್ಲಿ ನಿಂತು ತಮ್ಮ ಪ್ರಾಣ ಪಣಕ್ಕಿಟ್ಟು ದೇಶವನ್ನು ರಕ್ಷಿಸುತ್ತಿರುವ ಸಶಸ್ತ್ರ ಪಡೆ ಸಿಬ್ಬಂದಿಯ ತ್ಯಾಗವನ್ನು ಮರೆಯಬಾರದು’ ಎಂದು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಸೋಮವಾರ ಹೇಳಿದರು.

ಸುಪ್ರೀಂ ಕೋರ್ಟ್ ವಕೀಲರ ಸಂಘ ಆಯೋಜಿಸಿದ್ದ ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡಿದ್ದರು. ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಈಚೆಗಷ್ಟೇ ನಾಲ್ವರು ಯೋಧರನ್ನು ಹತ್ಯೆಗೈದ ಘಟನೆ ಹಿನ್ನಲೆಯಲ್ಲಿ ಮಾತನಾಡಿದ ಅವರು, ‘ಸಶಸ್ತ್ರ ಪಡೆ ಯೋಧರು ದೇಶಕ್ಕಾಗಿ ಪ್ರಾಣವನ್ನೇ ಅರ್ಪಿಸುತ್ತಾರೆ, ನಾವು ಕೂಡಾ ದೇಶಕ್ಕಾಗಿ ಎಲ್ಲವನ್ನೂ ತ್ಯಾಗಮಾಡಲು ಸಿದ್ಧರಿರೋಣ. ಕ್ರಿಸ್‌ಮಸ್‌ಗಾಗಿ ಹಾಡುವಾಗ ಅವರಿಗಾಗಿಯೂ ಹಾಡೋಣ’ ಎಂದರು.

ಇತರರ ಏಳಿಗೆಗಾಗಿ ತ್ಯಾಗಮಾಡುವುದೇ ಯೇಸು ಕ್ರಿಸ್ತನ ಜೀವನದ ಸಂದೇಶವಾಗಿದೆ ಎಂದರು. ವಕೀಲರ ಸಂಘದ ಸದಸ್ಯರಿಗಾಗಿ ಕಚೇರಿ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ಈ ವೇಳೆ ಹೇಳಿದರು.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಅಹ್ಸಾದುದ್ದೀನ್ ಅಮಾನುಲ್ಲಾ ಹಾಗೂ ಸುಪ್ರೀಂ ಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಆದಿಶ್ ಸಿ. ಅಗರ್ವಾಲ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.