ನವದೆಹಲಿ: ‘ನನ್ನ ಮತ ಯಾರಿಗೂ ಇಲ್ಲ’ (ನೋಟಾ) ಆಯ್ಕೆಯನ್ನು ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ (ಇವಿಎಂ) ನೀಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿ 10 ವರ್ಷಗಳು ಕಳೆದ ನಂತರವೂ, ‘ನೋಟಾ’ ಮತ ಚಲಾಯಿಸುತ್ತಿರುವ ಮತದಾರರ ಪ್ರಮಾಣ ಕಡಿಮೆಯೇ ಇದೆ. ಚುನಾವಣೆಯ ಫಲಿತಾಂಶದ ಮೇಲೆ ಯಾವ ಪರಿಣಾಮವನ್ನೂ ಹೊಂದಿರದ ಈ ಆಯ್ಕೆಯು ‘ಹಲ್ಲಿಲ್ಲದ ಹಾವು’ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸುಪ್ರೀಂ ಕೋರ್ಟ್ 2013ರಲ್ಲಿ ನೀಡಿದ ತೀರ್ಪಿನ ಪರಿಣಾಮವಾಗಿ ‘ನೋಟಾ’ ಆಯ್ಕೆ ಜಾರಿಗೆ ಬಂತು. ಕಳಂಕಿತರು ಚುನಾವಣಾ ಕಣ ಪ್ರವೇಶಿಸುವುದು ಕಡಿಮೆ ಆಗಬೇಕು ಎಂಬ ಉದ್ದೇಶದಿಂದ ಈ ಆಯ್ಕೆ ನೀಡಲಾಯಿತು.

ಕಳೆದ ಐದು ವರ್ಷಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳು ಹಾಗೂ ಲೋಕಸಭಾ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ, 1.29 ಕೋಟಿಗಿಂತ ಹೆಚ್ಚಿನವು ‘ನೋಟಾ’ ಮತಗಳು. ಹೀಗಿದ್ದರೂ, ಲೋಕಸಭಾ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಕಣದಲ್ಲಿ ಇದ್ದ, ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಳ ಕಂಡಿದೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಂಸ್ಥೆ ಸಿದ್ಧಪಡಿಸಿದ ವರದಿ ಪ್ರಕಾರ, ಘೋಷಿತ ಕ್ರಿಮಿನಲ್ ಪ್ರಕರಣ ಹೊಂದಿರುವ ಸಂಸದರ ಪ್ರಮಾಣವು ಕಳೆದ ಒಂದು ದಶಕದ ಅವಧಿಯಲ್ಲಿ ಏರಿಕೆ ಕಂಡಿದೆ. 2009ರಲ್ಲಿ 162 ಲೋಕಸಭಾ ಸದಸ್ಯರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ಇದ್ದವು. ಈ ಪೈಕಿ 76 ಮಂದಿಯ ವಿರುದ್ಧ ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳು ಇದ್ದವು.

ಕ್ರಿಮಿನಲ್ ಪ್ರಕರಣ ಹಾಗೂ ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಲೋಕಸಭಾ ಸದಸ್ಯರ ಸಂಖ್ಯೆಯು 2019ರಲ್ಲಿ ಹೆಚ್ಚಳವಾಗಿದೆ. ‘ಕ್ರಿಮಿನಲ್ ಪ್ರಕರಣಗಳ ವಿಚಾರದಲ್ಲಿ ನೋಟಾದಿಂದಾಗಿ ಯಾವ ಬದಲಾವಣೆಯೂ ಆಗಿಲ್ಲ. ವಾಸ್ತವದಲ್ಲಿ, ಕ್ರಿಮಿನಲ್ ಪ್ರಕರಣ ಹೊಂದಿರುವ ಅಭ್ಯರ್ಥಿಗಳ ಸಂಖ್ಯೆಯು ಹೆಚ್ಚಳವಾಗಿದೆ’ ಎಂದು ಎಡಿಆರ್ ಸಂಸ್ಥೆಯ ಮುಖ್ಯಸ್ಥ, ನಿವೃತ್ತ ಮೇಜರ್ ಜನರಲ್ ಅನಿಲ್ ವರ್ಮ ಹೇಳಿದರು.

ಬೇರೆ ಬೇರೆ ವಿಧಾನಸಭಾ ಚುನಾವಣೆಗಳು ಹಾಗೂ ಲೋಕಸಭಾ ಚುನಾವಣೆಯಲ್ಲಿ ಚಲಾವಣೆ ಆದ ‘ನೋಟಾ’ ಮತಗಳ ಪ್ರಮಾಣವು ಶೇಕಡ 0.5ರಿಂದ ಶೇ 1.5ರ ನಡುವೆ ಇದೆ. ‘ದುರದೃಷ್ಟದ ಸಂಗತಿಯೆಂದರೆ ನೋಟಾ ಹಲ್ಲಿಲ್ಲದ ಹಾವಾಗಿ ಪರಿಣಮಿಸಿದೆ. ಇದು ಭಿನ್ನಮತವನ್ನು ದಾಖಲಿಸಲು ಅಥವಾ ರಾಜಕೀಯ ಪಕ್ಷಗಳ ವಿರುದ್ಧದ ಕೋಪವನ್ನು ದಾಖಲಿಸಲು ಒಂದು ವೇದಿಕೆ ಮಾತ್ರ ಆಗಿದೆ’ ಎಂದು ವರ್ಮ ಹೇಳಿದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಕ್ಷೇತ್ರಗಳಲ್ಲಿ ‘ನೋಟಾ’ ಪ್ರಮಾಣವು ತುಸು ಹೆಚ್ಚಿದೆ ಎಂದು ಅವರು ತಿಳಿಸಿದರು. ‘ಬಹುಶಃ, ಬುಡಕಟ್ಟು ಸಮುದಾಯಗಳು ಹಾಗೂ ಪರಿಶಿಷ್ಟ ಜಾತಿಗಳ ಜನರಿಗೆ ಹೆಚ್ಚಿನ ದೂರುದುಮ್ಮಾನಗಳು ಇದ್ದಿರಬಹುದು. ಹಾಗಾಗಿ ಅವರು ಹೆಚ್ಚಿನ ಪ್ರಮಾಣದಲ್ಲಿ ನೋಟಾ ಚಲಾಯಿಸಿರಬಹುದು’ ಎಂದು ಅವರು ವಿಶ್ಲೇಷಿಸಿದರು.

2018ರ ನಂತರದ ವಿಧಾನಸಭಾ ಚುನಾವಣೆಗಳಲ್ಲಿ, ಕ್ರಿಮಿನಲ್ ಪ್ರಕರಣಗಳು ಇರುವ ಅಭ್ಯರ್ಥಿಗಳು ಮೂರು ಅಥವಾ ಅದಕ್ಕಿಂತ ಹೆಚ್ಚು ಇರುವ ಕ್ಷೇತ್ರಗಳಲ್ಲಿ ಒಟ್ಟು 26.77 ಲಕ್ಷ ‘ನೋಟಾ’ ಮತಗಳು ಚಲಾವಣೆ ಆಗಿವೆ.

‘ನೋಟಾ’ ಆಯ್ಕೆಗೆ ಹೆಚ್ಚಿನ ಬಲ ನೀಡುವ ಅಗತ್ಯ ಇದೆ ಎಂದು ಎಕ್ಸಿಸ್ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಪ್ರದೀಪ್ ಗುಪ್ತ ಅಭಿಪ್ರಾಯಪಟ್ಟಿದ್ದಾರೆ. ‘ನೋಟಾ ಮತಗಳಿಗಿಂತ ಕಡಿಮೆ ಮತ ಪಡೆಯುವ ಅಭ್ಯರ್ಥಿಗಳಿಗೆ ಮತ್ತೆ ಸ್ಪರ್ಧಿಸಲು ಅವಕಾಶ ಇರಬಾರದು. ಅಂತಹ ನಿಯಮ ಇಲ್ಲವಾದ ಕಾರಣ, ನೋಟಾ ಆಯ್ಕೆಯಿಂದ ಪ್ರಯೋಜನವೇನು ಎಂಬ ನಿಲುವು ಹಲವು ಮತದಾರರಲ್ಲಿ ಇದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.