ಹೈದರಾಬಾದ್: ಜನಪದ ಗಾಯಕ, ತೆಲಂಗಾಣ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ವಿ.ಸಾಯಿಚಂದರ್ (39) ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಬಿಆರ್ಎಸ್ ಪಕ್ಷ ತಿಳಿಸಿದೆ.

ಸಾಯಿಚಂದರ್ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದು, ಗೌರವ ನಮನ ಸಲ್ಲಿಸಿದ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಮೃತರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.

‘ಬಾಲ್ಯದಿಂದಲೇ ಅಸಾಧಾರಣ ಪ್ರತಿಭೆ ಹೊಂದಿದ್ದ ಕಲಾವಿದ, ಸಾಯಿಚಂದ್ ಅವರ ಹಠಾತ್ ನಿಧನ ತೆಲಂಗಾಣಕ್ಕೆ ಭರಿಸಲಾಗದ ನಷ್ಟ. ಪ್ರತ್ಯೇಕ ರಾಜ್ಯದ ಆಂದೋಲನದ ಸಂದರ್ಭ ಅವರ ಹಾಡು, ಮಾತು ಕೇಳಲು ಸಭೆಗಳಿಗೆ ಅಪಾರ ಜನರು ಜಮಾಯಿಸುತ್ತಿದ್ದರು’ ಎಂದು ಮುಖ್ಯಮಂತ್ರಿ ಸ್ಮರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.