ಜೈಪುರ: ರಾಜಸ್ಥಾನದ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಅವರು ವಿಐಪಿ ಸಂಸ್ಕೃತಿಗೆ ವಿದಾಯ ಹೇಳಿದ್ದಾರೆ.

ಭಜನ್ಲಾಲ್ ಅವರು ಇನ್ನು ಮುಂದೆ ರಸ್ತೆಯಲ್ಲಿ ಸಾಮಾನ್ಯ ಜನರಂತೆ ಸಂಚರಿಸಲಿದ್ದಾರೆ. ಸಿಗ್ನಲ್ಗಳಲ್ಲಿ ಅವರ ವಾಹನ ಹಾಗೂ ಬೆಂಗಾವಲು ವಾಹನ ಎಲ್ಲಾ ವಾಹನಗಳು ನಿಲ್ಲುವಂತೆಯೇ ನಿಲ್ಲಲಿದೆ. ಏಕೆಂದರೆ ಅವರು ತಮಗೆ ನೀಡಲಾದ ವಿಐಪಿ ಸವಲತ್ತುಗಳನ್ನು ತ್ಯಜಿಸಲು ನಿರ್ಧರಿಸಿದ್ದಾರೆ ಎಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕ ಯು.ಆರ್ ಸಾಹೂ ತಿಳಿಸಿದ್ದಾರೆ.

ವಿಐಪಿ ಸಂಚಾರದ ಸಮಯದಲ್ಲಿ ಸಾಮಾನ್ಯ ಜನರು ಮತ್ತು ಗಂಭೀರ ರೋಗಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಭಜನ್ಲಾಲ್ ಬುಧವಾರ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಅವರು ಬುಧವಾರ ಡಿಡಿಜಿ ಸಾಹೂ ಅವರಿಗೆ ನಿರ್ಧಾರದ ಕುರಿತು ಸೂಚನೆ ನೀಡಿದ್ದಾರೆ.

‘ಮುಖ್ಯಮಂತ್ರಿಗಳಿಗೆ ಒದಗಿಸಲಾದ ಭದ್ರತೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ವಿಐಪಿ ಸಂಚಾರ ವ್ಯವಸ್ಥೆಗೆ ಸಂಬಂಧಿಸಿದಂತೆ ಸಾಮಾನ್ಯ ಜನರು ಮತ್ತು ರೋಗಿಗಳು ಎದುರಿಸುತ್ತಿರುವ ಟ್ರಾಫಿಕ್ ಸಮಸ್ಯೆಗಳನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ' ಎಂದು ಡಿಜಿಪಿ ಸಾಹೂ ಪಿಟಿಐಗೆ ತಿಳಿಸಿದ್ದಾರೆ.
.ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್ಲಾಲ್ ಶರ್ಮಾ ಆಯ್ಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.