ನವದೆಹಲಿ: ಪ್ರವಾದಿ ಮಹಮ್ಮದರನ್ನು ಅವಹೇಳನ ಮಾಡಿದ್ದಕ್ಕೆ ಪ್ರತೀಕಾರವಾಗಿ ದೆಹಲಿ, ಉತ್ತರ ಪ್ರದೇಶ, ಗುಜರಾತ್ ಹಾಗೂ ಮುಂಬೈಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸುವುದಾಗಿ ‘ಅಲ್ ಕೈದಾ’ದ ಭಾರತೀಯ ಉಪಖಂಡ ಘಟಕ (ಎಕ್ಯುಐಎಸ್) ಎಚ್ಚರಿಕೆ ನೀಡಿದೆ.

‘ದೆಹಲಿ, ಮುಂಬೈ, ಉತ್ತರ ಪ್ರದೇಶ ಹಾಗೂ ಗುಜರಾತ್‌ಗಳಲ್ಲಿ ಕೇಸರಿ ಭಯೋತ್ಪಾದಕರು ತಮ್ಮ ಅಂತ್ಯವನ್ನು ಎದುರು ನೋಡಲಿದ್ದಾರೆ. ಅವರು ತಮ್ಮ ಮನೆಗಳಲ್ಲಿ ಅಥವಾ ತಮ್ಮ ಭದ್ರಕೋಟೆಗಳಲ್ಲಿ ಆಶ್ರಯ ಪಡೆಯಬಾರದು’ ಎಂದು ಬೆದರಿಕೆ ಪತ್ರದಲ್ಲಿ ಅಲ್ ಕೈದಾ ಉಲ್ಲೇಖಿಸಿದೆ.

ಪ್ರವಾದಿ ಮಹಮ್ಮದ್ಗೆ ಅವಮಾನ: ಹೇಳಿಕೆ ಖಂಡಿಸಿದ ದೇಶಗಳ ಸಂಖ್ಯೆ ಹೆಚ್ಚಳ

‘ಜಗತ್ತಿನಾದ್ಯಂತ ಮುಸ್ಲಿಮರ ಹೃದಯಗಳು ಒಡೆದುಹೋಗಿವೆ. ಪ್ರತೀಕಾರದ ಭಾವನೆಗಳಿಂದ ತುಂಬಿ ಹೋಗಿವೆ’ ಎಂದು ಅಲ್ ಕೈದಾ ಹೇಳಿದೆ.

ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ಮಾಧ್ಯಮವೊಂದರಲ್ಲಿ ಇತ್ತೀಚೆಗೆ ಪ್ರವಾದಿ ಮಹಮ್ಮದರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ತಕ್ಷಣವೇ ಅವರನ್ನು ಬಿಜೆಪಿಯಿಂದ ಅಮಾನತುಗೊಳಿಸಲಾಗಿತ್ತು.

ಪ್ರವಾದಿ ಮಹಮ್ಮದ್ ಅವಹೇಳನ: ಭಾರತದ ರಾಯಭಾರಿಗೆ ಇಂಡೊನೇಷ್ಯಾ ಸಮನ್ಸ್

ನೂಪುರ್ ಶರ್ಮಾ ಹೇಳಿಕೆಯನ್ನು ಇಂಡೊನೇಷ್ಯಾ, ಸೌದಿ ಅರೇಬಿಯಾ, ಮಾಲ್ಡೀವ್ಸ್, ಅರಬ್ ಸಂಯುಕ್ತ ಸಂಸ್ಥಾನ, ಜೋರ್ಡನ್, ಬಹರೈನ್, ಒಮಾನ್, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ಭಾನುವಾರವೇ ಖಂಡಿಸಿದ್ದವು. ಇದೀಗ ಇರಾಕ್ ಮತ್ತು ಲಿಬಿಯಾ ಕೂಡ ಹೇಳಿಕೆಯನ್ನು ಖಂಡಿಸಿವೆ.

ಅಲ್ ಕೈದಾ ಬೆದರಿಕೆ ಪತ್ರದ ಬೆನ್ನಲ್ಲೇ ಭದ್ರತಾ ಸಂಸ್ಥೆಗಳು ಕಟ್ಟೆಚ್ಚರ ವಹಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.